ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್..; ಆಮಂತ್ರಣ ಪತ್ರಿಕೆ ವೈರಲ್

Share with

ಬೆಂಗಳೂರು: ಖ್ಯಾತ ನಿರೂಪಕಿ ಅನುಶ್ರೀ ಅವರು ಉದ್ಯಮಿ ರೋಷನ್ ಅವರೊಂದಿಗೆ ಆಗಸ್ಟ್ 28 ರಂದು(ಗುರುವಾರ) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಸರಳವಾಗಿರುವ ವಿವಾಹ ಆಮಂತ್ರಣ ಪತ್ರಿಕೆ ಶುಕ್ರವಾರ ಮಾಧ್ಯಮಗಳಿಗೆ ಲಾಭವಾಗಿದ್ದು, ಬೆಂಗಳೂರಿನ ಕಗ್ಗಲೀಪುರದಲ್ಲಿರುವ ತಿಟ್ಟಹಳ್ಳಿ ರೋಡ್ ನಲ್ಲಿರುವ ಸಂಭ್ರಮ ಬೈ ಸ್ವಾನ್ಸಿನೆಸ್ ಸ್ಟುಡಿಯೋಸ್ ನಲ್ಲಿ ಸಂಭ್ರಮದ ಸಮಾರಂಭನಡೆಯಲಿದೆ. ಬೆಳಗ್ಗೆ 10.56 ರ ಶುಭ ಮುಹೂರ್ತ ನಿಗದಿಯಾಗಿದೆ.

ರೋಷನ್ ಅವರು ರಾಮಮೂರ್ತಿ ಮತ್ತು ಸಿಸಿಲಿಯಾ ದಂಪತಿಯ ಪುತ್ರ. ಚಿತ್ರರಂಗದ ಗಣ್ಯರು, ಸೇರಿ ತೀರಾ ಆಪ್ತರು ಮತ್ತು ಎರಡೂ ಕಡೆಯ ಕುಟುಂಬ ಸದಸ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *