ಪ್ರಸಿದ್ಧ ಹಾಸ್ಯ ನಟ ಫಿಶ್ ವೆಂಕಟ್ ಇನ್ನಿಲ್ಲ

Share with

ಟಾಲಿವುಡ್ ಚಿತ್ರರಂಗ ಮತ್ತೋರ್ವ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಿದೆ. ಹಿರಿಯ ನಟ ಕೋಟ ಶ್ರೀನಿವಾಸ ರಾವ್ ನಿಧನರಾಗಿ ವಾರ ಕಳೆಯುವ ಮುನ್ನವೇ ಮತ್ತೊಬ್ಬ ಹಿರಿಯ ನಟ ಇಹಲೋಕ ತ್ಯಜಿಸಿದ್ದಾರೆ.

ಹಾಸ್ಯನಟ ಫಿಶ್ ವೆಂಕಟ್ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಹಲವು ಚಿತ್ರಗಳಲ್ಲಿ ಖಳನಟನಾಗಿ, ಹಾಸ್ಯ ಖಳನಟನಾಗಿ, ಹಾಸ್ಯನಟನಾಗಿ ನಟಿಸಿ ನಗೆಯ ಹೊಳೆ ಹರಿಸಿದ್ದ ಅವರ ಮೂಲ ಹೆಸರು ಮಂಗಳಂಪಲ್ಲಿ ವೆಂಕಟೇಶ್. ಆದರೆ, ಮೀನು ವ್ಯಾಪಾರ ಮಾಡುತ್ತಿದ್ದರಿಂದ ಫಿಶ್ ವೆಂಕಟ್ ಎಂದೇ ಪ್ರಸಿದ್ಧಿ.


Share with

Leave a Reply

Your email address will not be published. Required fields are marked *