ಖ್ಯಾತ ನಿರೂಪಕಿ ಕುಡ್ಲದ ಬೆಡಗಿಗೆ ಕಂಕಣ ಭಾಗ್ಯ..!! ವರ ಯಾರು ಗೊತ್ತಾ?

Share with

ಬೆಂಗಳೂರು: ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಮದುವೆ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಗುಲ್ಲಾಗುತ್ತಿತ್ತು. ಇದೀಗ ಅವರ ಮದುವೆ ನಿಗದಿಯಾಗಿರುವ ಬಗ್ಗೆ ಸುದ್ದಿಯಾಗಿದೆ.

ಇದೇ ವರ್ಷ ಅನುಶ್ರೀ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಕೊಡಗು ಮೂಲಕ ಐಟಿ ಉದ್ಯಮಿ ಜತೆ ಅನುಶ್ರೀ ಅವರು ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ಮನೆಯವರು ನೋಡಿದ ಹುಡುಗನ ಜತೆ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೇ ಆಗಸ್ಟ್ 28ರಂದು ಅವರು ಕೊಡಗು ಮೂಲದ ಕಾರ್ಪೋರೇಟ್ ಉದ್ಯಮಿ ರೋಷನ್ ಎನ್ನುವವರ ಜತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿದೆ.

ರೋಷನ್ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಸ್ನೇಹಿತರ ಜತೆ ಮಾತನಾಡುತ್ತಾ ಅನುಶ್ರೀ ಅವರು ಇದೇ ವರ್ಷ ತಾನು ಮದುವೆ ಆಗಲಿದ್ದೇನೆ ಎಂದಿದ್ದರು.

ಮದುವೆ ಆಗುವ ಹುಡುಗ ಹೇಗಿರಬೇಕೆನ್ನುವ ಪ್ರಶ್ನೆಗೆ ಅವರು, “ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು. ಈ ವರ್ಷ ಅನುಶ್ರೀ ಮದುವೆ ಗ್ಯಾರಂಟಿ” ಎಂದಿದ್ದರು.

ಇದೀಗ ಅವರು ಮದುವೆ ಆಗುವ ಬಗ್ಗೆ ಸುದ್ದಿ ಹೊರಬಿದ್ದಿದ್ದು, ಇದನ್ನು ಕೇಳಿ ಫ್ಯಾನ್ಸ್ ಖುಷ್ ಆಗಿದ್ದಾರೆ.


Share with

Leave a Reply

Your email address will not be published. Required fields are marked *