
ಸಕಲೇಶಪುರ: ಇಲ್ಲಿನ ಜೆ.ಎಂ.ಎಫ್.ಸಿ. ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಳೆದ ಮೂರು ವರ್ಷದ ಹಿಂದೆ ಬೆಂಗಳೂರಿನಿಂದ ಸಕಲೇಶಪುರಕ್ಕೆ ವರ್ಗಾವಣೆಗೊಂಡಿದ್ದ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶರಾದ ಶ್ರೀಮತಿ ಧನಲಕ್ಷ್ಮಿ, ಮೇಡಂ ರವರಿಗೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದು, ಈ ಸಂದರ್ಭದಲ್ಲಿ ವಕೀಲರ ಸಂಘದ ವತಿಯಿಂದ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಳೆದು ಮೂರು ವರ್ಷಗಳ ಅವಧಿಯಲ್ಲಿ ನ್ಯಾಯಾಧೀಶರು ಸಕಲೇಶಪುರದಲ್ಲಿ ಸಲ್ಲಿಸಿದ ಸೇವೆಯನ್ನು ಕಂಡು ಹಲವು ಹಿರಿಯ ವಕೀಲರು ಮತ್ತು ಕಿರಿಯ ವಕೀಲರುಗಳು ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
• ನ್ಯಾಯಾಧೀಶರು ಇದ್ದಂತಹ ಸಮಯದಲ್ಲಿ ಕಕ್ಷಿದಾರರುಗಳಿಗೆ ಅತಿ ಶೀಘ್ರದಲ್ಲಿ ನ್ಯಾಯದಾನ ಒದಗಿಸುವಲ್ಲಿ ಮತ್ತು ವಕೀಲರುಗಳಿಗೆ ಯಾವುದೇ ಭೇದಭಾವ ಇಲ್ಲದೆ ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಂಡರು ಮತ್ತು ಹೆಚ್ಚು ಯುವ ವಕೀಲರು ಮತ್ತು ಮಹಿಳಾ ವಕೀಲರುಗಳು ನ್ಯಾಯಾಧೀಶರಿಂದ ಸ್ಪೂರ್ತಿಯಗಿದರೆ.
ಈ ಸಂದರ್ಭದಲ್ಲಿ ಗ್ರಾಮಾಂತರ ಮತ್ತು ಹಳ್ಳಿಗಳಿಂದ ನೊಂದು ಬಂದಂತವರಿಗೆ ರಾಜಿ ಸಂಧಾನದ ಮೂಲಕ ಸಾವಿರಾರು ಕೇಸುಗಳನ್ನು ಬಗೆಹರಿಸಿರುತ್ತಾರೆ. ಮತ್ತು ಇವರ ಕರ್ತವ್ಯದ ಸಮಯದಲ್ಲಿ ಅಂಗನವಾಡಿ ,ತಾಲೂಕ್ ಪಂಚಾಯಿತಿ, ಶಾಲಾ ಕಾಲೇಜು, ಆಸ್ಪತ್ರೆಗಳು, ಸಮಾಜ ಕಲ್ಯಾಣ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ, ಮುಂತಾದ ಕಡೆಗಳಲ್ಲಿ ಅತಿ ಹೆಚ್ಚು ಕಾನೂನು ಮಾಹಿತಿ ಶಿಬಿರಗಳನ್ನು ನಡೆಸಿಕೊಟ್ಟಿರುತ್ತಾರೆ.
ಈ ಸಮಯದಲ್ಲಿ ನ್ಯಾಯಾಧೀಶರು ಮಾತನಾಡುತ್ತಾ ಇಲ್ಲಿನ ವಕೀಲರುಗಳು ನ್ಯಾಯದಾನ ಮಾಡುವ ಸಮಯದಲ್ಲಿ ತಮಗೆ ಸಹಕರಿಸಿದ ರೀತಿಯನ್ನು ಕಂಡು ಎಲ್ಲರೂ ನನ್ನನ್ನು ಕುಟುಂಬದ ಸದಸ್ಯರಂತೆ ಕಂಡರೂ ಎಂದು ಸ್ಮರಿಸಿ ಭಾವುಕರಾದರು . ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಸರ್ಕಾರಿ ವಕೀಲರುಗಳು, ಹಿರಿಯ ಮತ್ತು ಕಿರಿಯ ವಕೀಲರು ನ್ಯಾಯಾಂಗ ಇಲಾಖೆಯ ನೌಕರರು ಹಾಜರಿದ್ದರು.