ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಎಂಬ ಒತ್ತಾಯ ಕೆಲವು ರಾಜ್ಯಗಳಂತೆ ವಿಪಕ್ಷಗಳಿಂದಲೂ ಕೇಳಿಬರುತ್ತಿದೆ. ಈ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದಾಗ ಕೇಂದ್ರ ಸಚಿವ ಪಂಕಜ್ ಚೌಧರಿ ಸ್ಪಷ್ಟನೆ ನೀಡಿದ್ದಾರೆ.

2025ರ ಮಾರ್ಚ್ 31ರ ಸ್ಥಿತಿಗೆ ದೇಶಾದ್ಯಂತ ₹28.50 ಲಕ್ಷ ಕೋಟಿ ಕೃಷಿ ಸಾಲ ಬಾಕಿ ಇದೆ. ಈ ಮೊತ್ತ ಸುಮಾರು 1.76 ಕೋಟಿ ಕೃಷಿ ಖಾತೆಗಳಿಗೆ ಸಂಬಂಧಿಸಿದೆ. ಇಷ್ಟೊಂದು ಬಾಕಿ ಇರುವುದರಿಂದ ತಕ್ಷಣದಲ್ಲಿ ಯಾವುದೇ ಸಾಲ ಮನ್ನಾ ಮಾಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.




