ಮಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಏಪ್ರಿಲ್.7ರಂದು ಆಮ್ ಆದ್ಮಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ದೇಶಾದ್ಯಂತ ಉಪವಾಸ ಧರಣಿಗೆ ಕರೆ ನೀಡಿದ್ದು, ಮಂಗಳೂರು ವಿಧಾನ ಸೌಧದ ಬಳಿ ಸಾಮೂಹಿಕ ಉಪವಾಸ ಆರಂಭಿಸಿದ್ದಾರೆ.
ಬೆಳಗ್ಗೆ 6:30 ಕ್ಕೆ ಆರಂಭಗೊಂಡಿದ್ದು ಸಂಜೆ 6ರವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಜಿಲ್ಲಾಧ್ಯಕ್ಷ ವಿಶು ಕುಮಾರ್, ಸಂಘಟನಾ ಕಾರ್ಯದರ್ಶಿ ಶನನ್ ಪಿಂಟೊ ಹಾಗೂ ಇನ್ನಿತರರು ಉಪಸ್ಥಿತರಿದ್ದರು.