ಮಸೀದಿ ಕಾಂಪೌಂಡ್ ಮೇಲೆ ಮಗನಿಂದ ಜೈ ಶ್ರೀರಾಮ್ ಬರಹ ಬರೆಸಿದ ತಂದೆ

Share with

ಮಸೀದಿ ಗೋಡೆ ಮೇಲೆ ವ್ಯಕ್ತಿಯೋರ್ವ ತನ್ನ ಮಗನ ಕೈಯಿಂದ ಜೈ ಶ್ರೀರಾಮ್ ಎಂದು ಬರಿಸಿದ್ದು, ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ಕೋಮು ಸೌಹಾರ್ದತೆ ಹಾಳು ಮಾಡುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಸೆಕ್ಟರ್ 44ರ ಮಸೀದಿ ಕಾಂಪೌಂಡ್ ಮೇಲೆ ಬರಹ ಬರೆದು ಬಳಿಕ ಇಬ್ಬರು ಆಟೋದಲ್ಲಿ ತೆರಳಿದ ದೃಶ್ಯ CC ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೇಸ್ ಸಂಬಂಧ ನವನಗರ ಠಾಣೆ ಪೊಲೀಸರು, ಯಮನೂರಿ & ಆತನ ಮಗನನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದಾರೆ.


Share with

Leave a Reply

Your email address will not be published. Required fields are marked *