ವೀಕ್ಷಕವಾಣಿ: ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಎಂಬುದು ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಬಹಳ ವಿಜೃಂಭಣೆಯಿಂದ ಮದುವೆಯನ್ನು ನೆರವೇರಿಸುತ್ತಾರೆ. ಇದರಲ್ಲೂ ಕೆಲವರು ಮಗಳ ಸಂತೋಷಕ್ಕಾಗಿ ವರನಿಗೆ ವರದಕ್ಷಿಣೆ ರೂಪದಲ್ಲಿ ಬೆಲೆಬಾಳುವ ವಸ್ತು ಅಥವಾ ನಗದನ್ನು ನೀಡುತ್ತಾರೆ. ಆದರೆ ಇಲ್ಲೊಂದೆಡೆ ವಧುವಿನ ಕಡೆಯವರು ವರನಿಗೆ 12 ವಿಷಕಾರಿ ಹಾವುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಡುವುದು ಬಹಳ ಆಶ್ಚರ್ಯಕರವಾಗಿದೆ.
ಹೌದು, ಛತ್ತೀಸ್‌ಗಢದಲ್ಲಿ ಬುಡಕಟ್ಟು ಜನಾಂಗದವರು ಪ್ರಸ್ತುತ ಇಂತಹದೊಂದು ವಿಚಿತ್ರವಾದ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಇಲ್ಲಿ ಹೊಸ ಅಳಿಯನಿಗೆ ವಿಷಪೂರಿತ ಹಾವುಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಒಂದು ನಿರ್ದಿಷ್ಟ ಸಮುದಾಯದ ಪದ್ಧತಿ ಬೇರೆಲ್ಲೂ ಕಾಣಸಿಗುವುದಿಲ್ಲ. ಕೊರ್ಬಾ ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಮುಕುಂದಪುರ ಗ್ರಾಮದ ಸಂವಾರ ಬುಡಕಟ್ಟು ಜನರು ಈ ಸಂಪ್ರದಾಯವನ್ನು ಅನುಸರಿಸುತ್ತಾರೆ.
ಶತಮಾನಗಳಿಂದ ಸಮಾಜದಲ್ಲಿ ಈ ಸಂಪ್ರದಾಯ ಮುಂದುವರಿದಿದೆಯಂತೆ. ವಾಸ್ತವವಾಗಿ ಸನ್ವರ ಬುಡಕಟ್ಟಿನ ಜನರು ವಿಷಕಾರಿ ಹಾವುಗಳನ್ನು ಹಿಡಿಯುವ ಕೆಲಸವನ್ನು ಮಾಡುತ್ತಾರೆ ಮತ್ತು ಇದು ಅವರ ಪೂರ್ವಜರು ಮಾಡುತ್ತಿದ್ದ ಕೆಲಸವಾಗಿದೆ. ಈ ಜನರು ವಿಷಪೂರಿತ ಹಾವುಗಳನ್ನು ತೋರಿಸಿ ಜನರಿಂದ ಹಣ ಕೇಳುತ್ತಾ ಜೀವನ ಸಾಗಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇಂದಿಗೂ ಮಗಳ ತಂದೆ ಅಳಿಯನಿಗೆ ವರದಕ್ಷಿಣೆಯಾಗಿ ಹಾವನ್ನು ಕೊಡುವ ವಾಡಿಕೆ ಇದೆ.
ಮಗಳ ಮದುವೆ ನಿಶ್ಚಯವಾದ ನಂತರ ತಂದೆ ವರದಕ್ಷಿಣೆ ಕೊಡಲು ಹಾವು ಹಿಡಿಯಲು ಆರಂಭಿಸುತ್ತಾರೆ ಎನ್ನುತ್ತಾರೆ ಈ ಸಮುದಾಯಗಳು. ಸಂಪ್ರದಾಯದ ಪ್ರಕಾರ, ಈ ಹಾವುಗಳಲ್ಲಿ ಅತ್ಯಂತ ವಿಷಕಾರಿ ಹಾವುಗಳನ್ನು ಹಿಡಿಯಬೇಕು. ಇದರಲ್ಲಿ ಹಾವು, ಕ್ರೈಟ್, ವಿರಾಜ ಜಾತಿಯ ಹಾವುಗಳು ಸಹ ಸೇರಿವೆ.
ಈ ಹಾವುಗಳು ತುಂಬಾ ವಿಷಕಾರಿಯಾಗಿದ್ದು ಯಾರಿಗಾದರೂ ಕಚ್ಚಿದರೆ ಆ ವ್ಯಕ್ತಿ ತಕ್ಷಣವೇ ಸಾಯುತ್ತಾನೆ ಎಂದು ಹೇಳಲಾಗುತ್ತದೆ. ಹುಡುಗಿಯ ತಂದೆ ಸಮಯಕ್ಕೆ ಸರಿಯಾಗಿ ಹಾವನ್ನು ಹಿಡಿಯಲು ವಿಫಲವಾದರೆ, ಮದುವೆ ನಿಲ್ಲುತ್ತದೆ ಎಂಬ ನಂಬಿಕೆಯಿದೆ. ಆದರೆ ಇಂದಿಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಆ ಸಂಪ್ರದಾಯ ಮುಂದುವರಿದಿದೆ. ಸಂಪ್ರದಾಯದ ಪ್ರಕಾರ, 21 ವಿಷಪೂರಿತ ಹಾವುಗಳನ್ನು ವರದಕ್ಷಿಣೆಯಾಗಿ ನೀಡಿದ ನಂತರ, ಅಳಿಯ 2 ತಿಂಗಳ ಕಾಲ ಹಾವುಗಳನ್ನು ತನ್ನೊಂದಿಗೆ ಇಟ್ಟುಕೊಂಡು ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿ ಮತ್ತೆ ಕಾಡಿಗೆ ಬಿಡುತ್ತಾನೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.