ಕಾಸರಗೋಡು: ಇಲ್ಲಿನ ಕೂಡ್ಲು ಸಿಪಿಸಿಆರ್‌ಐ ಬಳಿ ಇರುವ ಕಾವುಗೋಳಿ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಫೆ.9 ಮತ್ತು 10 ರಂದು ಉಡುಪಿ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಅನುಗ್ರಹದೊಂದಿಗೆ, ಕ್ಷೇತ್ರದ ತಂತ್ರಿ ಬ್ರಹ್ಮ ಶ್ರೀ ಉಳಿತ್ತಾಯ ವಿಷ್ಣು ಅಸ್ರರವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಲಿದೆ.
ಫೆ.09 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, 7.30ಕ್ಕೆ ಉಷ ಪೂಜೆ, ಕಲಶ ಪೂಜೆ, 8 ಗಂಟೆಗೆ ಲಕ್ಷಾರ್ಚನೆ, ಬೆಳಿಗ್ಗೆ 10 ಗಂಟೆಗೆ ನವಕಾಭಿಷೇಕ, 10 ರಿಂದ 11 ಗಂಟೆಯವರೆಗೆ ನೀರ್ಚಾಲ್ ಚೌಕಿ ಕೃಷ್ಣನ್ ಖತ್ತರ್ ರವರ ಪ್ರಾಯೋಜಕತ್ವದಲ್ಲಿ ಹರಿನಾಮ ಸಂಕೀರ್ತನೆ ಜರಗಲಿದೆ. ಬಳಿಕ ಬೆಳಿಗ್ಗೆ 11ರಿಂದ 12 ಗಂಟೆಯವರೆಗೆ ಕಡಪ್ಪುರ ಕಾವುಗೋಳಿ ಮಹಾವಿಷ್ಣು ಮಹಿಳಾ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ, 11.30ಕ್ಕೆ ತುಲಾಭಾರ ಸೇವೆ ಬಳಿಕ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆದು ಮಧ್ಯಾಹ್ನ 1 ಗಂಟೆಗೆ ಅನ್ನಪ್ರಸಾದ ನೆರವೇರಲಿದ್ದು ಇದರ ಪ್ರಾಯೋಜಕತ್ವವವನ್ನು ಕಡಪ್ಪುರ ಗಣೇಶ್ ಕೃಪಾ ಬೋಟ್ ಮತ್ತು ಎಂಟರ್ ಪ್ರೈಸಸ್ ಇವರು ನಿರ್ವಹಿಸಿದ್ದಾರೆ. ಸಂಜೆ 5.30ಕ್ಕೆ ರಾಜನ್ ಮಾರಾರ್ ಸಂಘ ಇವರಿಂದ ತಾಯಂಬಕ, ಸಂಜೆ 6.15ಕ್ಕೆ ದೀಪಾರಾಧನೆ, ಸಂಜೆ 6.15-7 ಗಂಟೆಗೆ ಮಹಾವಿಷ್ಣು ಭಜನಾ ಸೇವಾ ಸಂಘ ಕಡಪ್ಪುರ ಕಾವುಗೋಳಿ ಇವರಿಂದ ಭಜನೆ, ರಾತ್ರಿ 7 ರಿಂದ 8 ಗಂಟೆಯವರೆಗೆ ಕ್ಷೇತ್ರದ ಪ್ರಧಾನ ಅರ್ಚಕ ಉದಯಕುಮಾರ್ ಕಲ್ಲೂರಾಯರವರ ಪ್ರಾಯೋಜಕತ್ವದಲ್ಲಿ ಕೊಲ್ಲಂ ನಲ್ಲಿ ನಡೆದ 62ನೇ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ʼಎʼ ಗ್ರೇಡ್ ಪಡೆದ ಬಿ.ಇ.ಯಂ. ಪ್ರೌಢ ಶಾಲೆಯ ಮಕ್ಕಳ ಯಕ್ಷಗಾನ ತಂಡದವರಿಂದ ʼನರಕಾಸುರ ಮೋಕ್ಷʼ ಯಕ್ಷಗಾನ ಬಯಲಾಟ ಜರಗಲಿದೆ. ರಾತ್ರಿ 8ಗಂಟೆಗೆ ಪೂಜೆ ನಡೆದು ಬಳಿಕ ಉತ್ಸವ ಬಲಿ, ಸಿಡಿಮದ್ದು ಪ್ರಯೋಗ, ದರ್ಶನ ಬಲಿ, ರಾಜಾಂಗಣ ಪ್ರಸಾದ, ರಾತ್ರಿ 11ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ಬಳಿಕ ವಿಷ್ಣುಮೂರ್ತಿ ದೈವದ ತೊಡಂಙಲ್ ಜರಗಲಿದೆ.
ಫೆ.10ರಂದು ಬೆಳಿಗ್ಗೆ 10ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆದು ಬಳಿಕ ಪ್ರಸಾದ ವಿತರಣೆಯಾಗಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಧ್ಯಾಹ್ನ 1ಕ್ಕೆ ಅನ್ನಪ್ರಸಾದ ನೆರವೇರಲಿದ್ದು ಇದರ ಪ್ರಾಯೋಜಕತ್ವವನ್ನು ಮಂಗಳೂರು ಕಡಪ್ಪುರ ಪೂರ್ಣೇಶ್ವರಿ ಬೋಟ್ ಕಾವುಗೋಳಿ ಇವರು ವಹಿಸಿದ್ದಾರೆ. ಅಪರಾಹ್ನ 3 ಗಂಟೆಗೆ ವಿಷ್ಣುಮೂರ್ತಿ ಭಂಡಾರ ನಿರ್ಗಮನವಾಗಲಿದೆ ಎಂದು ಕಾವುಗೋಳಿ ಶೀ ಮಹಾವಿಷ್ಣು ದೇವಸ್ಥಾನದ ಆಡಳಿತ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.