
ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ನಡೆಸುತ್ತಿರುವ ಎಲ್ಲಾ ಶಾಂತಿ ಪ್ರಯತ್ನಗಳು ವಿಫಲವಾಗುತ್ತಿವೆ.

ದಕ್ಷಿಣ ಗಾಜಾದ ರಫಾದಲ್ಲಿರುವ ನೆರವು ಕೇಂದ್ರದ ಬಳಿ ಇಸ್ರೇಲಿಯ ಪಡೆ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 30 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಅಲ್ಲದೇ 115ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಬೆಳಗ್ಗೆ ಪರಿಹಾರ ಕೇಂದ್ರದ ಬಳಿ ಸಾವಿರಾರು ಪ್ಯಾಲೆಸ್ತೀನಿಯರ ಮೇಲೆ ಈ ದಾಳಿ ನಡೆದಿದೆ. ಗಾಯಾಳುಗಳನ್ನು ನಾಸರ್ ಆಸ್ಪತ್ರೆಗೆ ದಾಖಲಿಸಲಾಗಿದೆ.




