ಕಾರಿಗೆ ಪೆಟ್ರೋಲ್ ತುಂಬಿಸಿ ಹಣ ಪಾವತಿಸದೆ ಪರಾರಿ..!

Share with

ಮಂಗಳೂರು: ಪೆಟ್ರೋಲ್ ಬಂಕ್ ನಲ್ಲಿ ಕಾರಿಗೆ ಪೆಟ್ರೋಲ್ ತುಂಬಿಸಿ ಹಣ ಪಾವತಿಸದೆ ಪರಾರಿಯಾಗಿರುವ ಘಟನೆ ಜು. 20ರಂದು ರಾತ್ರಿ 11.19ಕ್ಕೆ ನಡೆದಿದೆ.

car petrol

ಕಾವೂರಿನ ಪೆಟ್ರೋಲ್ ಪಂಪ್‌ನಲ್ಲಿ ನೀಲಿ ಬಣ್ಣದ ಕಾರಿಗೆ ಫುಲ್‌ಟ್ಯಾಂಕ್ ಪೆಟ್ರೋಲ್ ತುಂಬಿಸಿದ ಅಪರಿಚಿತ 4,100.60 ರೂ. ಬಿಲ್‌ ಪಾವತಿಸದೆ ಕಾರನನ್ನು ವೇಗವಾಗಿ ಚಲಾಯಿಸಿ ಕಾವೂರು ಜಂಕ್ಷನ್ ಕಡೆಗೆ ಪರಾರಿಯಾಗಿದ್ದಾನೆ.

ಪೆಟ್ರೋಲ್ ಪಂಪ್ ಸಿಬ್ಬಂದಿ ಕಾರನ್ನು ಬೆನ್ನಟ್ಟಿ ನೋಡಿದಾಗ ಕಾರಿನ ಎದುರು ಮತ್ತು ಹಿಂಬದಿ ನೋಂದಣಿ ಸಂಖ್ಯೆ ಇರಲಿಲ್ಲ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *