ಕಾಸರಗೋಡು: ವರ್ಕಾಡಿ ಪಂಚಾಯತಿನ ಆನೆಕಲ್ಲು ಕತ್ತೆರಿಕೋಡಿ ನಿವಾಸಿ ಜನಾರ್ಧನ ನಾಯ್ಕ ಮತ್ತು ಲೀಲಾವತಿ ದಂಪತಿ ಪುತ್ರ ಎರಡು ವರ್ಷದ ಹೇಮಂತ್ ಇವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಮಂಜೇಶ್ವರ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ(ರಿ.)ಯಿಂದ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷ ನ್ಯಾಯವಾದಿ ನವೀನ್ ರಾಜ್ ಧನಸಹಾಯ ಹಸ್ತಾಂತರ ಮಾಡಿದರು. ಈ ವೇಳೆ ವಸಂತ್ ಬೋರ್ಕಳ, ಅಂಕಿತ್ ಪಾವೂರ್,ನಿತೇಶ್ ಪಜಿಂಗರ್, ಶರತ್ ಕಡಂಬರ್ ,ಪ್ರದೀಪ್ ಮೊರತ್ತನೆ ಉಪಸ್ಥಿತರಿದ್ದರು.