ಢಾಕಾ, ಅಕ್ಟೋಬರ್ 18: ಬಾಂಗ್ಲಾದೇಶದ (Bangladesh) ಢಾಕಾದಲ್ಲಿರುವ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅಪಘಾತದ (Fire Accident) ಕಾರಣ ತಿಳಿದಿಲ್ಲ. ಇದುವರೆಗೂ ಯಾವುದೇ ಸಾವುನೋವುಗಳು ಅಥವಾ ಗಾಯಗಳಾಗಿವೆಯೇ ಎಂದು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.
ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ದಟ್ಟವಾದ ಹೊಗೆ ಗಾಳಿಯಲ್ಲಿ ಆವರಿಸಿದ್ದರಿಂದ ಭೀತಿ ಹರಡಿತು. ಬೆಂಕಿಯನ್ನು ನಿಯಂತ್ರಿಸಲು ಕನಿಷ್ಠ 30 ಅಗ್ನಿಶಾಮಕ ವಾಹನಗಳು ಆಗಮಿಸಿದವು. ಆದರೂ ಬೆಂಕಿ ಆರಿಸಲು ಬಹಳ ಸಮಯ ಬೇಕಾಯಿತು. ಈ ಘಟನೆಯಿಂದಾಗಿ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.





