ಮೊದಲ ಬಾರಿಗೆ ಹ್ಯೂಮನಾಯ್ಡ್ ರೋಬೋಟ್‌ಗೆ ಪಿಎಚ್.ಡಿ ಗೌರವ

Share with

ಬೀಜಿಂಗ್: ಚೀನಾದ ಶಾಂಘೈದ ಧಿಯೇಟರ್ ಅಕಾಡೆಮಿಯಲ್ಲಿ ‘ಕ್ಯೂಯುಬಾ 01’ ಹೆಸರಿನ ಹ್ಯೂಮನಾಯ್ಡ್ ರೋಬೋಟ್‌ಗೆ ಪಿಎಚ್.ಡಿ ಪದವಿ ನೀಡಲಾಗಿದೆ. ಇದು ಮಾನವತೆ ಮತ್ತು ನಾಟಕ ಚಲನಚಿತ್ರ ಕ್ಷೇತ್ರದಲ್ಲಿ ದೊರೆತ ಮೊದಲ ಪಿಎಚ್.ಡಿ ಪದವಿ ಎಂಬುದಾಗಿ ತಿಳಿಸಲಾಗಿದೆ.

ಈ ಪಿಎಚ್.ಡಿ ಪದವಿಯನ್ನು ಶಾಂಘೈ ವಿಶ್ವವಿದ್ಯಾಲಯ ಮತ್ತು ಡ್ರಾಪ್ ರೋಬೋಟಿಕ್ಸ್ ಸಂಸ್ಥೆಯ ಸಂಯುಕ್ತ ಸಹಕಾರದಲ್ಲಿ ನೀಡಲಾಗಿದೆ. ಕ್ಯೂಯುಬಾ 01 ರೋಬೋಟ್ ಮಾನವನಂತಹ ಪ್ರಜ್ಞೆ ಮತ್ತು ಅಭಿನಯ ಸಾಮರ್ಥ್ಯವನ್ನು ಹೊಂದಿದ್ದು, ಸಿನಿಮಾ ಮತ್ತು ನಾಟಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದೆ.

ಚೀನಿಯ ಪ್ರಾಧ್ಯಾಪಕರು ಈ ಸಾಧನೆಯ ಬಗ್ಗೆ ಅಭಿಮಾನದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದು ರೋಬೋಟಿಕ್ಸ್ ಲೋಕದ ಮಹತ್ವದ ಮುಂದುವರಿದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *