ಉಪ್ಪಳ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಗಳಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಪೈವಳಿಕೆ ನಗರದ ಜಿ.ಎಚ್.ಎಸ್.ಎಸ್ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಅಬೂಬಕ್ಕರ್ ರಾಫಿ ಎಲ್.ಪಿ ವಿಭಾಗದ ಮಲಯಾಳ ಪ್ರಸಂಗದಲ್ಲಿ ಪ್ರಥಮ ಸ್ಥಾನ, ಮಲಯಾಳ ಕಂಠಪಾಠದಲ್ಲಿ ಎ.ಗ್ರೇಡ್, ಅರಬಿಕ್ ಕಂಠಪಾಠದಲ್ಲಿ ಎ.ಗ್ರೇಡ್ ಪಡೆದಿದ್ದಾನೆ. ಈತ ಲಾಲ್ಭಾಗ್ ಪಾಡಿಯ ರಹೀಮ್-ಬುಶ್ರ ದಂಪತಿಯ ಪುತ್ರನಾಗಿದ್ದಾನೆ.