ಬೆಂಗಳೂರು: ಬಿಗ್ ಬಾಸ್ ಮನೆಯ 13ನೇ ವಾರದ ಕ್ಯಾಪ್ಟನ್ ಆಗಿ ಗಿಲ್ಲಿ ನಟ ಆಯ್ಕೆ ಆಗಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಗಿಲ್ಲಿ ಮನೆಯ ಕ್ಯಾಪ್ಟನ್ ಆಗಿದ್ದಾರೆ.

‘ಬಿಗ್ ಬಾಸ್ ಸೀಸನ್ 12’ (Bigg Boss Kannada 12)ನಲ್ಲಿ ವೀಕ್ಷಕರ ಮೆಚ್ಚಿನ ಸ್ಪರ್ಧಿಯಾಗಿರುವ ಗಿಲ್ಲಿ ನಟ (Gilli Nata) ಮನೆಯ ಕ್ಯಾಪ್ಟನ್ ಆಗಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಫ್ಯಾಮಿಲಿಯವರು ಬಂದಿದ್ದರು. ಮನೆಗೆ ಬಂದವರಿಗೆ ಬಿಗ್ ಬಾಸ್ ಕೆಲ ಚಟುವಟಿಕೆಗಳನ್ನು ನೀಡಿದ್ದರು. ಅದರಲ್ಲಿ ಕ್ಯಾಪ್ಟನ್ ಅಭ್ಯರ್ಥಿಯ ಆಯ್ಕೆಯೂ ಒಂದಾಗಿತ್ತು.
ಸ್ಪರ್ಧಿಗಳ ಮನೆಯವರು ಸೂರಜ್, ಅಶ್ವಿನಿ, ಗಿಲ್ಲಿ ಅವರನ್ನು ಆಯ್ಕೆ ಮಾಡಿದ್ದರು. ಇದರಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಅವರ ಹೆಸರು ಹೆಚ್ಚಾಗಿತ್ತು. ಹೀಗಾಗಿ ಗಿಲ್ಲಿ ಹಾಗೂ ಅಶ್ವಿನಿ ಅವರು ಕ್ಯಾಪ್ಟನ್ಸಿ ಟಾಸ್ಕೆಗೆ ಆಯ್ಕೆ ಆಗಿದ್ದಾರೆ.
ಬುಟ್ಟಿಯಲ್ಲಿ ಹೆಚ್ಚು ಚೆಂಡುಗಳನ್ನು ಸಂಗ್ರಹಿಸುವ ಟಾಸ್ಕ ನೀಡಲಾಗಿದೆ. ಹೆಚ್ಚು ಚೆಂಡಗಳನ್ನು ಗಿಲ್ಲಿ ಅವರು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದು, ಆ ಮೂಲಕ ಗಿಲ್ಲಿ ಅವರು ಬಿಗ್ ಬಾಸ್ ಮನೆಯ ಮುಂದಿನ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
ಗಿಲ್ಲಿ ಕ್ಯಾಪ್ಟನ್ ಆದ ಬಳಿಕ ಅವರ ಖದರ್ – ಸ್ಟೈಲ್ ಬದಲಾಗಿದೆ. ಆದರೆ ಸಂಭ್ರಮದಲ್ಲಿ ಗಿಲ್ಲಿ ಮೈಕ್ ಧರಿಸುವುದನ್ನೇ ಮರೆತು ಹೋಗಿದ್ದಾರೆ. ಕ್ಯಾಪ್ಟನ್ ಆದ ಕೆಲವೇ ನಿಮಿಷದಲ್ಲಿ ಒಂದು ನಿಯಮವನ್ನು ಉಲ್ಲಂಘಿಸಿದ್ದಾರೆ.
ಗಿಲ್ಲಿ ಈ ಹಿಂದೆ ಹಲವು ಬಾರಿ ಕ್ಯಾಪ್ಟನ್ ಓಟಕ್ಕೆ ಆಯ್ಕೆ ಆಗಿದ್ದರು. ಆದರೆ ಕ್ಯಾಪ್ಟನ್ ಆಗಿರಲಿಲ್ಲ. ಅವರು ಕ್ಯಾಪ್ಟನ್ ಆಗಬೇಕೆಂದು ಅವರ ಅಪಾರ ಅಭಿಮಾನಿಳು ಬಯಸಿದ್ದರು. ಅದರಂತೆ ಗಿಲ್ಲಿ ಮುಂದಿನ ವಾರದ ಕ್ಯಾಪ್ಟನ್ ಆಗಿದ್ದಾರೆ.




