
ಸಕಲೇಶಪುರ : ತಾಲೂಕಿನ ವೀರಶೈವ ಲಿಂಗಾಯಿತರ ಮಾತೃ ಸಂಸ್ಥೆಯಾದ “ಶ್ರೀ ಮಲೆನಾಡು ವೀರಶೈವ ಸಮಾಜ(ರಿ)” ಶ್ರೀ ಬಸವೇಶ್ವರ ಪುತ್ಥಳಿ ತಮ್ಮೆಲ್ಲರ ತನು ಮನ ಧನ ಸಹಕಾರದಿಂದ ಹೋದ ವರ್ಷ 13-06-2024ರ ಗುರುವಾರದ ಶುಭ ದಿನದಂದು ಲೋಕಾರ್ಪಣೆ ಕಂಡಾಗ ಸಹಜವಾಗಿಯೇ ಹರ್ಷ ಉಂಟಾಗಿದೆ.
ಇದು ವೀರಶೈವ ಲಿಂಗಾಯತ ತಲೆಮಾರುಗಳ ಭಕ್ತ ಸಮುದಾಯಕ್ಕೆ ಸಕಲೇಶಪುರದ ಪಟ್ಟಣದ ಶ್ರೀ ಬಸವೇಶ್ವರ ಮೂರ್ತಿ ಮೊಟ್ಟಮೊದಲ ಪೂಜನೀಯ ದೃಶ್ಯವಾಗಿದೆ.
ಆತ್ಮೀಯರೇ ದಿನಾಂಕ 13-06-2025 ನೇ ಶುಕ್ರವಾರ ಬ್ಯಾಕರವಳ್ಳಿ ಶ್ರೀ ಗುರುವೇಗೌಡ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ 10.30 ಕ್ಕೆ ಸಂಸ್ಥೆಯ ಅಧ್ಯಕ್ಷರಾದ ಎಂ ಎಸ್ ಧರ್ಮಪ್ಪನವರ ನೇತೃತ್ವದಲ್ಲಿ, ಕಾರ್ಯಕಾರಿ ಮಂಡಳಿ ಸದಸ್ಯರ ಶ್ರಮದೊಂದಿಗೆ, ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ಬಸವೇಶ್ವರ ಪುತ್ಥಳಿ ಲೋಕಾರ್ಪಣೆಗೊಂಡ ಮೊದಲ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನೆರವೇರಲಿದೆ, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಎಸ್ ಅಧಿಕಾರಿಗಳು ಸಿದ್ದಗಂಗಾ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ಪರಮಾಪ್ತರಾಗಿದ್ದ ಡಾ. ಸಿ ಸೋಮಶೇಖರ್ ಭಾಗವಹಿಸಲಿದ್ದಾರೆ.
ತಮಗೆಲ್ಲ ತಿಳಿದಂತೆ ಸಾಂಸ್ಕೃತಿವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ನಮ್ಮನ್ನು ವಿಂಗಡಿಸಿ ನಮ್ಮ ಒಗ್ಗಟ್ಟು ಮುರಿಯುವ ಪ್ರಯತ್ನ ನಡೆಯುತ್ತಿರುವುದು ತಮಗೆಲ್ಲ ಗೊತ್ತಿರುವ ವಿಚಾರ ಇಂತಹ ಸಂದರ್ಭದಲ್ಲಿ ನಾವು ನಮ್ಮ ಒಗ್ಗಟ್ಟಿನ ಪ್ರದರ್ಶನ ಮಾಡಬೇಕಾದ ಅವಶ್ಯಕತೆ ಅನಿವಾರ್ಯತೆ ಇದೆ, ಹಾಗಾಗಿ ಇದೊಂದು ನಿಮಿತ್ತ ನಿವೇದನೆ ಒಂದು ದಿನ ಬಿಡುವು ಮಾಡಿಕೊಂಡು ಭಾಗವಹಿಸಿ ಸಮಾಜಕ್ಕೆ ಸಂಘಟನೆಗೆ ಶಕ್ತಿ ತುಂಬಿ. ಸಂಸ್ಥೆಯ ಸದಸ್ಯರಾಗಿ. ಸಕಲೇಶಪುರದಲ್ಲಿ ವೀರಶೈವ ಲಿಂಗಾಯಿತರ ಸಂಗಮವಾಗಲಿ.. ಸರ್ವರಿಗೂ ಒಳಿತಾಗಲಿ.