ಕಾಸರಗೋಡು : ಬಿಎಂಎಸ್(ಭಾರತೀಯ ಮಜ್ದೂರ್ ಸಂಘ)ನ 70ನೇ ವರ್ಷದ ಸ್ಥಾಪನಾ ದಿನವಾದ ಜುಲೈ 23 ರಂದು ಕಾಸರಗೋಡು ಕೋ ಅಪರೇಟಿವ್ ಟೌನ್ ಬ್ಯಾಂಕ್ ಮುಂಭಾಗದಲ್ಲಿ ಧ್ವಜಾರೋಹಣ ಮಾಡಲಾಯಿತು. ಯೂನಿಯನ್ ಉಪಾಧ್ಯಕ್ಷ ಕಮಲಾಕ್ಷರವರು ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಕಾರ್ಯದರ್ಶಿ ಸುನೀಲ್ ಕುಮಾರ್ ಶೆಟ್ಟಿ, ಶರತ್, ಸತ್ಯ, ದಿನೇಶ್, ಪವನ್ ಕುಮಾರ್ ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.




