ಹಿರಿಯ ವಿದ್ಯಾರ್ಥಿಗಳಿಂದ ಬೆದರಿಕೆ

Share with

ಕಾಸರಗೋಡು: ತಳಂಗರೆ ಸರಕಾರಿ ವೋಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ವನ್ ವಿದ್ಯಾರ್ಥಿಗಳಿಗೆ ಪ್ಲಸ್ ಟು ವಿದ್ಯಾರ್ಥಿಗಳು “ಇನ್ನು ನಾವು ಹೇಳುತ್ತೇವೆ, ಅದನ್ನು ನೀವು ಕೇಳಿ ಅನುಸರಿಸಬೇಕು’ ಎಂದು ಬೆದರಿಕೆ ಹಾಕಿರುವ ಕುರಿತು ದೂರು ದಾಖಲಾಗಿದೆ.

ಈ ಬೆದರಿಕೆಯನ್ನು ಪ್ಲಸ್ ವನ್ ವಿದ್ಯಾರ್ಥಿಗಳಿಗೆ ವಿತರಿಸಲೆಂದು ತಂದ ಚಾಕಲೇಟ್‌ನ ಕವರ್‌ನಲ್ಲಿ ಮುದ್ರಿಸಲಾಗಿದೆ.

ಈ ಶಾಲೆಗೆ ಕಾರೊಂದರಲ್ಲಿ ಬರುತ್ತಿದ್ದ ಕೆಲವು ವಿದ್ಯಾರ್ಥಿಗಳು ಪೊಲೀಸರನ್ನು ಕಂಡು ಹೆದರಿ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಶಂಕೆಗೊಂಡ ಪೊಲೀಸರು ಕಾರನ್ನು ತಪಾಸಣೆ ಮಾಡಿದಾಗ ಚಾಪ್ಲೆಟ್ ಪತ್ತೆಯಾಯಿತು. ಚಾಕ್ಸೆಟ್ ಪ್ಯಾಕೆಟ್‌ಗಳ ಮೇಲೆ ಬೆದರಿಕೆಯ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು. ಈ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *