ಪೆರ್ವೋಡಿ ನೀರ್ಚಾಲ್‌ನಲ್ಲಿ ಹೆಜ್ಜೇನು ಹುಳುಗಳ ತಾಣ ಪತ್ತೆ  ಸ್ಥಳೀಯರಲ್ಲಿ ಹೆಚ್ಚಿದ ಆತಂಕ: ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಸಂದರ್ಶನ

Share with


ಬಾಯಾರು:  ಪೆರ್ವೋಡಿ ಪಟ್ಲದಲ್ಲಿ ಹೆಜ್ಜೇನು ಹುಳುಗಳು ದಾಳಿಯಿಂದ ಸುರೇಶ್.ಯು ಭಟ್ ಮೃತಪಟ್ಟ ಘಟನೆ ನಡೆದ ಬೆನ್ನಲ್ಲೇ ಇದೇ ಪರಿಸರದ ನೀರ್ಚಾಲು ಎಂಬಲ್ಲಿ ತೋಟದಲ್ಲಿರುವ ಮರವೊಂದರಲ್ಲಿ ಬೃಹತ್  ಹೆಜ್ಜೇನು ಹುಳುಗಳ ತಾಣ ಪತ್ತೆಯಾಗಿದ್ದು, ಇದು ಊರವರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಸುರೇಶ್. ಯು.ಭಟ್ ರವರ ಸಾವಿಗೆ ಕಾರಣವಾದ ಹೆಜ್ಜೇನು ಹುಳುಗಳ ತಾಣವನ್ನು ಮೊನ್ನೆಯಿಂದ  ಸ್ಥಳೀಯ ಯುವಕರು ಹುಡುಕುತ್ತಿದ್ದರು. ಆದರೆ ಎಲ್ಲಿಯೂ ಪತೆಯಾಗಲಿಲ್ಲ. ಬುಧವಾರ ಬೆಳಿಗ್ಗೆ  ಪಟ್ಲ ಸಮೀಪದ ನೀರ್ಚಾಲ್ ಎಂಬಲ್ಲಿ ರಾಮಣ್ಣ ಶೆಟ್ಟಿ ಎಂಬವರ ಅಡಿಕೆ ತೋಟದಲ್ಲಿರುವ ಸಾಗುವಾನಿ ಮರದಲ್ಲಿ ಸಾವಿರಾರು ಹೆಜ್ಜೇನು ಹುಳುಗಳು ಪತ್ತೆಯಾಗಿದೆ. ಸಮೀಪದಲ್ಲಿ ಶಾಲೆ, ಅಂಗನವಾದಿ, ಮನೆಗಳು ಹೊಂದಿರುವ ಪ್ರದೇಶವಾಗಿದ್ದು, ಆತಂಕ ಉಂಟಾಗಿದೆ.  ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಕಾಸರಗೋಡು ಅರಣ್ಯ ಇಲಾಖೆ ಅಧಿಕಾರಿªಯೋರ್ವರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಇದು  ಜೇನು ಹುಳುಗಳಲ್ಲಿ ದೊಡ್ಡಜೇನು ಹುಳುಗಳು  ಎಂದು ತಿಳಿಸಿದ್ದಾರೆ.  ಇದನ್ನು ತೆರವುಗೊಳೀಸುವ ಬಗ್ಗೆ ಅಧಿಕಾರಿ ಭರವಸೆ ನೀಡಿದ್ದಾರೆ.


Share with

Leave a Reply

Your email address will not be published. Required fields are marked *