ತಿರುವನಂತಪುರ: ಪ್ರಮುಖ CPI(M) ನಾಯಕ & ಕೇರಳದ ಮಾಜಿ CM ವಿ.ಎಸ್. ಅಚ್ಯುತಾನಂದನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿ.ಎಸ್. ಅಚ್ಯುತಾನಂದನ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅವರನ್ನು ಇಂದು(ಜೂ.23) ತಿರುವನಂತಪುರಂನ ಪಟ್ಟೋಮ್‌ನಲ್ಲಿನ SUT ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಐಸಿಯುನಲ್ಲಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರಿಗೆ ಕಳೆದ ವರ್ಷ ಅಕ್ಟೋಬರ್ 20 ರಂದು 101 ವರ್ಷ ತುಂಬಿದೆ.