
ಆಲೂರು: ಮಾಜಿ ಪ್ರಧಾನಿ ಹೆಚ್ .ಡಿ . ದೇವೇಗೌಡರ 93ನೇ ಜನ್ಮದಿನವನ್ನು ಆಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ ನೇತೃತ್ವದಲ್ಲಿ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ .ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಆಚರಿಸಿದರು .

ಈ ಸಮಯದಲ್ಲಿ ಮಾತನಾಡಿದ ಆಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ .ಮಣ್ಣಿನ ಮಗ ದೇವೇಗೌಡರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನದಲ್ಲಿ ಕರ್ನಾಟಕ ಅಲ್ಲದೆ ರಾಷ್ಟಮಟ್ಟದಲ್ಲಿ ನೀರಾವರಿ ಸಮಸ್ಯೆಗಳನ್ನು ಪರಿಹರಿಸಿದ್ದಾರೆ . ರೈತ ಮಣ್ಣಿನ ಮಕ್ಕಳು ಸಹ ಪ್ರಧಾನಿ ಹುದ್ದೆ ನಿಭಾಯಿಸಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ,
ದೇವರು ಮಾಜಿ ಪ್ರಧಾನಿ ಹೆಚ್ .ಡಿ . ದೇವೇಗೌಡರಿಗೆ ಆರೋಗ್ಯವಂತರಾಗಿ ಬಾಳಿ ಬದುಕಿ .ಯುವ ಜನತೆ ಮಾರ್ಗದರ್ಶನ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.




