
ಉಪ್ಪಳ: ಬೇಕೂರು ಬಳಿಯ ಶಾಂತಿಗುರಿಯಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಶ್ರೀ ನಾಗ, ರಕ್ತೇಶ್ವರಿ, ಗುಳಿಗ ಮತ್ತು ಸಪರಿವಾರ ದೈವಗಳ ಶಿಲಾನ್ಯಾಸ ಮತ್ತು ನಿಧಿ ಸಂಚಯನ ಕಾರ್ಯಕ್ರಮ ಜ.16ರಂದು ಬೆಳಿಗ್ಗೆ 8.50ರಿಂದ 9.36ರ ಶುಭ ಮುಹೂರ್ತದಲ್ಲಿ ಜರಗಲಿದೆ. ಇದರಂಗವಾಗಿ ಅಂದು ಬೆಳಿಗ್ಗೆ 9.30ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮಿಜಿಯವರು ಆಶೀರ್ವಚನ ನೀಡುವರು. ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ನಡಿಬೈಲು ಶಂಕರನಾರಾಯಣ ತಂತ್ರಿಗಳು, ಶ್ರೀ ಕ್ಷೇತ್ರದ ಶಿಲ್ಪಿಗಳಾದ ರಮೇಶ ಕಾಂರoತ ಬೆದ್ರಡ್ಕ ರವರ ಉಪಸ್ಥಿತಿಯಲ್ಲಿ ನಡೆಯುವ ಸಭೆಯಲ್ಲಿ ಸುಫಲಚಂದ್ರ ನೈಕ್ ಅಧ್ಯಕ್ಷತೆ ವಹಿಸುವರು. ವಿವಿಧ ವಲಯಗಳ ಗಣ್ಯರಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಸೌಂದರ್ಯ ರಮೇಶ್, ಕೆ.ಕೆ ಶೆಟ್ಟಿ ಮುಂಡಪಳ್ಳ, ಸಂಜೀವ ಶೆಟ್ಟಿ ತಿಂಬರ, ನಾರಾಯಣ ಹೆಗ್ಡೆ ಕೋಡಿಬೈಲು, ಲಂಚುಲಾಲ್, ಅಶೋಕ್ ಕುಮಾರ್ ಹೊಳ್ಳ, ಕೃಷ್ಣಪ್ಪ ಪೂಜಾರಿ ದೇರಂಬಳ, ಪ್ರಸಾದ್ ಶೆಟ್ಟಿ. ಪ್ರಭಾಕರ ಶೇನವ, ಶಿವಾನಂದ ಆಚಾರ್ಯ ಮೊದಲಾದವರು ಉಪಸ್ಥಿತರಿರುವರು.





