ಉಪ್ಪಳ ಗೇಟ್‌ನಲ್ಲಿ ನೂತನ ರೈಲ್ವೇ ಫ್ಲೈಓವರ್ ನಿರ್ಮಾಣಕ್ಕೆ ಶಂಕುಸ್ಥಾಪನೆ

Share with

ಉಪ್ಪಳ: ಕೇಂದ್ರ ರೈಲ್ವೇ ಇಲಾಖೆಯ “ಅಮೃತ್ ಭಾರತ್ ಸ್ಟೇಶನ್ ಸ್ಕೀಮಿ”ನ ಅಂಗವಾಗಿ ಉಪ್ಪಳ ರೈಲ್ವೇ ಗೇಟಿನ (ಉಪ್ಪಳ ಗೇಟ್) ಸಮೀಪದಲ್ಲಿ ನೂತನ ರೈಲ್ವೇ ಫ್ಲೈ ಓವರ್ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಫೆ.27ರಂದು ಮಧ್ಯಾಹ್ನ ಆಲ್‌ಲೈನ್ ಮೂಲಕ ನೆರವೇರಿಸಿದರು.

ಉಪ್ಪಳ ರೈಲ್ವೇ ಗೇಟ್ ಪರಿಸರದಲ್ಲಿ ನಡೆದ ಸಭಾಕಾರ್ಯಕ್ರಮ ಉದ್ಘಾಟನೆ

ಉಪ್ಪಳ ರೈಲ್ವೇ ಗೇಟ್ ಪರಿಸರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಪಾಲಕ್ಕಾಡ್ ಡಿವಿಶನ್ ರೈಲ್ವೇ ಅಧಿಕಾರಿಗಳು, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಮೀನ ಟೀಚರ್, ಉಪಾಧ್ಯಾಕ್ಷ ಹನೀಫ್.ಪಿ.ಕೆ, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪಂಚಾಯತ್ ಸದಸ್ಯ ವಿಜಯ ಕುಮಾರ್ ರೈ, ವಾರ್ಡ್ ಸದಸ್ಯ ಮೊಹಮ್ಮದ್ ಹುಸೈನ್, ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ, ರಫೀಕ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಂಶನೆಯನ್ನು ನೀಡಿದರು.

ಉಪ್ಪಳ ರೈಲ್ವೇ ಗೇಟ್ ಪರಿಸರದಲ್ಲಿ ನಡೆದ ಸಭಾಕಾರ್ಯಕ್ರಮ

ಬಿಜೆಪಿ ಮುಖಂಡರಾದ ಆದರ್ಶ ಬಿ ಎಂ, ಸುನಿಲ್ ಅನಂತಪುರ, ಲೋಕೇಶ್ ನೋಂಡ, ಕಿಶೋರ್ ಭಗವತಿ, ಜಯಂತಿ ಶೆಟ್ಟಿ, ರಂಜಿತ್ ಶಾರದಾ ನಗರ ಸಹಿತ ಬಿಜೆಪಿ ಮುಖಂಡರು ಹಾಗೂ ಗೋಲ್ಡನ್ ರಹಿಮಾನ್ ಉಪಸ್ಥಿತರಿದ್ದರು. ಊರವರು ಭಾರೀ ಸಂಖ್ಯೆಯಲ್ಲಿ ಭಾಗಹಿಸಿದರು.


Share with

Leave a Reply

Your email address will not be published. Required fields are marked *