ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ಗರ್ಭಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ

Share with

ಮಂಜೇಶ್ವರ: ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ಶ್ರೀ ಪಾಡಾಂಗರೆ ಭಗವತೀ ಮಾತೆಯ ಹಾಗೂ ವೀರಪುತ್ರ ದೈವದ ಗರ್ಭಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ಗರ್ಭಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ.

ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಧಾರ್ಮಿಕ ಸಭೆಯನ್ನು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಂ. ಗೋಪಾಲ ಬಂದ್ಯೋಡು ವಹಿಸಿದ್ದರು. ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಮೂಡುಮನೆ ಅಶೋಕ ರಾಮಚಂದ್ರ ಪದಕಣ್ಣಾಯ, ಕೇಶವ ಕಾರ್ನವರ್, ನಾರಾಯಣ ಭಗವತೀ ಪೂಜಾರಿ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉದ್ಯಮಿ ಕುಸುಮೋದರ ಶೆಟ್ಟಿ ದಡ್ಡಂಗಡಿ, ಮಹಾಬಲೇಶ್ವರ ಭಟ್ ಎಡಕ್ಕಾನ, ಧಾರ್ಮಿಕ ಮುಂದಾಳುಗಳಾದ ದೇವಿಚರಣ್ ಶೆಟ್ಟಿ, ನಾರಾಯಣ ಹೆಗ್ಡೆ ಕೋಡಿಬೈಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಪ್ರವೀಣ, ಡಾ.ಎಂ.ಶ್ರೀಧರ ಭಟ್ ಉಪ್ಪಳ, ಹರಿನಾಥ ಭಂಡಾರಿ ಮುಳಿಂಜ, ಶ್ರೀಧರ ಶೆಟ್ಟಿ ಗುಬ್ಯ ಕನ್ಯಾನ, ರಾಮಪ್ರಕಾಶ್ ಆಳ್ವ ಪಟ್ಟತ್ತೂರು, ಜಯರಾಮ ಬಲ್ಲಂಗುಡೇಲು, ರವೀಂದ್ರ ಶೆಟ್ಟಿ ಕರಿಬೈಲು, ಸುಕುಮಾರ ಉಪ್ಪಳ, ಕರುಣಾಕರ ಕುಂಬಳೆ, ಸತೀಶ್ ವೈದ್ಯರ್, ಇಂದಿರಾ ಕೋರಿಕ್ಕಾರು, ಮಾರಪ್ಪ ಶೆಟ್ಟಿ ಕೌಡೂರುಬೀಡು, ರತನ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ದಡ್ಡಂಗಡಿ ಶುಭ ಹಾರೈಸಿದರು. ತೃಪ್ತಿ.ಕೆ.ಜೆ ಪ್ರಾರ್ಥಿಸಿದರು.

ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಮೂಡಂಬೈಲು ಸ್ವಾಗತಿಸಿ, ಧಾರ್ಮಿಕ ಮುಂದಾಳು ದಿನಕರ.ಬಿ.ಎಂ, ನ್ಯಾಯವಾದಿ ಕೆ.ಎಂ ಗಂಗಾಧರ ಕೊಂಡೆವೂರು, ಅರವಿಂದಾಕ್ಷ ಭಂಡಾರಿ ದಡ್ಡಂಗಡಿ, ಹರೀಶ್ ಶೆಟ್ಟಿ ಮಾಡ ನಿರೂಪಿಸಿದರು. ಆಶಾಲತಾ ಪೆಲಪ್ಪಾಡಿ ವಂದಿಸಿದರು. [ಗರ್ಭಗುಡಿಗೆ ಶಿಲಾನ್ಯಾಸ ಸಮಾರಂಭ] ಕ್ಷೇತ್ರದ ತಂತ್ರಿವರ್ಯರಾದ ಮೂಡುಮನೆ ಅಶೋಕ ರಾಮಚಂದ್ರ ಪದಕಣ್ಣಾಯವರ ನೇತೃತ್ವದಲ್ಲಿ ಗ್ರಾಮದ ಮುಖ್ಯಸ್ಥರ, ಅಚ್ಚಮ್ಮಾರರ ಮತ್ತು ಗುರಿಕಾರರ ಉಪಸ್ಥಿತಿಯಲ್ಲಿ ಶಿಲ್ಪಿ ಕುಂಞ ರಾಮನ್ ಕಾಸರಗೋಡು ಶಿಲಾನ್ಯಾಸ ಕಾರ್ಯ ನೆರವೇರಿಸಿದರು.

ಶ್ರೀ ಪಾಡಾಂಗರೆ ಭಗವತೀ ಮಾತೆಯ ಗರ್ಭಗುಡಿಗೆ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹಾಲೆರೆದು ಶಿಲಾನ್ಯಾಸ ನಡೆಸಿದರು. ಶ್ರೀ ವೀರಪುತ್ರ ದೈವದ ಗರ್ಭಗುಡಿಗೆ ಉದ್ಯಮಿ ಕುಸುಮೋಧರ ಶೆಟ್ಟಿ ದಡ್ಡಂಗಡಿ ಹಾಲೆರೆದು ಶಿಲಾನ್ಯಾಸ ನಿರ್ವಹಿಸಿದರು ಗ್ರಾಮದ ಮುಖ್ಯಸ್ಥರು, ಕ್ಷೇತ್ರದ ಜೀರ್ಣೋದ್ದಾರ ಸಮಿತಿ, ಸೇವಾ ಸಮಿತಿ, ಮಹಿಳಾ ಸಂಘ, ತೀಯಾ ಸೇವಾ ಸಮಿತಿ, ನಲುವತ್ತು ಬಿಲ್ಲಿ ಹಾಗೂ ಊರ ಪರವೂರ ಭಕ್ತರು ಭಾಗವಹಿಸಿದ್ದರು.


Share with

Leave a Reply

Your email address will not be published. Required fields are marked *