ನಾಲ್ಕನೇ ತರಗತಿಯ ದ್ವೇಷ; 62ನೇ ವರ್ಷದಲ್ಲಿ ಸಹಪಾಠಿಗೆ ಕಲ್ಲೇಟು!

Share with

ಕಾಸರಗೋಡು: ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ನಡೆದ ಜಗಳದ ಹಳೇ ದ್ವೇಷದಿಂದ ಈಗ 60 ವರ್ಷ ದಾಟಿದ ಸಹಪಾಠಿಗಳಿಬ್ಬರೂ ಮತ್ತೆ ಪರಸ್ಪರ ಕಲ್ಲಿನಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ.

ವೆಳ್ಳರಿಕುಂಡು ಮಾಲೋಂ ವೆಟಕೊಂಬಿಲ್ ಬಾಬು (62) ನೀಡಿದ ದೂರಿನಂತೆ ನಾಲ್ಕನೇ ತರಗತಿಯಲ್ಲಿ ಸಹಪಾಠಿಯಾಗಿದ್ದ ಮಾಲೋ ನಿವಾಸಿ ಬಾಲಕೃಷ್ಣನ್ ಮತ್ತು ಅವರ ಸ್ನೇಹಿತ ವಲಿಯ ಪ್ಲಾಕಲ್ ಮ್ಯಾಥ್ಯ (62) ವಿರುದ್ಧ ವೆಳ್ಳರಿಕುಂಡು ಪೊಲೀಸರು ಕೇಸು ದಾಖಲಿಸಿದ್ದಾರೆ. ಗಾಯಗೊಂಡ ಬಾಬು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕಲ್ಲಿನಿಂದ ಮುಖ ಮತ್ತು ಬೆನ್ನಿಗೆ ಹೊಡೆದು ಗಾಯಗೊಳಿಸಿರುವುದಾಗಿ ಪೊಲೀಸರಿಗೆ ಬಾಬು ದೂರು ನೀಡಿದ್ದಾರೆ.


Share with

Leave a Reply

Your email address will not be published. Required fields are marked *