ಮಂಗಳೂರು: ಅಮೆರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್ ನೀಡುವುದಾಗಿ ನಂಬಿಸಿ 3.44 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ ಜೂ. 18ರಂದು ಬೆಳಗ್ಗೆ ಅಪರಿಚಿತ ನಂಬರ್‌ನಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಅಮೆರಿಕನ್ ಎಕ್ಸ್‌ಪ್ರೆಸ್ ಕ್ರೆಡಿಟ್ ಕಾರ್ಡ್ ನೀಡುವುದಾಗಿ ನಂಬಿಸಿದ್ದಾನೆ. ಬಳಿಕ ವಾಟ್ಸ್‌ಆ್ಯಪ್‌ಗೆ ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್ ಅನ್ನೈ ಎನ್ನುವ ಲಿಂಕ್ ಕಳುಹಿಸಿದ್ದು, ಕ್ಲಿಕ್ ಮಾಡಿದ ಬಳಿಕ ಕಾರ್ಡನ್ನು ವಿಳಾಸಕ್ಕೆ ಕಳುಹಿಸುವುದಾಗಿ ತಿಳಿಸಿದನು. ಅದರಂತೆ ದೂರುದಾರರು ಲಿಂಕ್ ಕ್ಲಿಕ್ ಮಾಡಿದ್ದು, ಆಗ ಅವರಲ್ಲಿದ್ದ ವಿವಿಧ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ನಿಂದ ಹಂತ ಹಂತವಾಗಿ ಒಟ್ಟು 3,44,655 ರೂ. ವರ್ಗಾವಣೆಯಾಗಿದೆ.