ಕಾರಾಗೃಹದಲ್ಲಿರುವ ಬಂಧಿತರಿಗಾಗಿ ಉಚಿತವಾಗಿ 50 ಬೆಡ್‌ಶೀಟ್‌ ವಿತರಣೆ

Share with

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ 06-03-2026 ರಂದು ಮಂಡ್ಯ ಜಿಲ್ಲೆಯ ಮದ್ದೂರಿನ ಧ್ವನಿ ಲಯನ್ ಕ್ಲಬ್ ವತಿಯಿಂದ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾರಾಗೃಹದಲ್ಲಿರುವ ಬಂಧಿತರಿಗಾಗಿ ಉಚಿತವಾಗಿ 50 ಬೆಡ್‌ಶೀಟ್‌ಗಳನ್ನು ವಿತರಿಸಲಾಯಿತು.
ಇದೇ ವೇಳೆ ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಒಬ್ಬ ವ್ಯಕ್ತಿ ಈಗಾಗಲೇ ಬಿಡುಗಡೆಗೆ ಅರ್ಹನಾಗಿದ್ದರೂ ₹20,000 ದಂಡದ ಹಣವನ್ನು ಕಟ್ಟಲು ಸಾಧ್ಯವಾಗದೆ ಹಲವು ದಿನಗಳಿಂದ ಕಾರಾಗೃಹದಲ್ಲೇ ಉಳಿದಿದ್ದನು. ಆತನ ಕುಟುಂಬಸ್ಥರೂ ಬಿಡುಗಡೆಗೊಳಿಸಲು ಮುಂದೆ ಬರದ ಹಿನ್ನೆಲೆಯಲ್ಲಿ ಮಾನವೀಯತೆ ತೋರಿದ ಮಂಡ್ಯ ಜಿಲ್ಲೆಯ ಮದ್ದೂರಿನ ಧ್ವನಿ ಲಯನ್ ಕ್ಲಬ್ ಸದಸ್ಯರು ದಂಡದ ಹಣವನ್ನು ಪಾವತಿಸಿ ಆತನ ಬಿಡುಗಡೆಗೆ ಸಹಾಯ ಮಾಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಬಸವರಾಜ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈ ಬುನ್ನಿಸಾ ಅವರು ಭಾಗವಹಿಸಿದ್ದರು. ನ್ಯಾಯಾಧೀಶರ ಸಮ್ಮುಖದಲ್ಲಿ ದಂಡದ ಹಣವನ್ನು ಕಾರಾಗೃಹ ಅಧೀಕ್ಷಕರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ ಕ್ಲಬ್ ಸದಸ್ಯರಾದ ಮನೋಜ್ ಗೌಡ ಅವರನ್ನು ಮಂಗಳೂರು ಗೌರವಾನ್ವಿತ ನ್ಯಾಯಾಧೀಶರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಧ್ಯಕ್ಷರಾದ ಶ್ರೀಮತಿ ರಜನಿ ರಾಜ್, ಲಯನ್ ಸದಸ್ಯರಾದ ಮನೋಜ್ ಗೌಡ, ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ರಾವ್, ವಕೀಲರಾದ ಪುರಂದರ ಶೆಟ್ಟಿ ಹಾಗೂ ಜೈಲು ಅಧೀಕ್ಷಕರಾದ ಶರಣಬಸಪ್ಪ     ಮಂಗಳೂರು ಸಮಾಜ ಸೇವಕರಾದ ಗಿರೀಶ್ ಭಾಗವಹಿಸಿದ್ದರು ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು


Share with

Leave a Reply

Your email address will not be published. Required fields are marked *