ಬಂಟ್ವಾಳ: ಡಿ.3ರಂದು ಬಿ.ಸಿ ರೋಡಿನಲ್ಲಿ ದೇಸಿ ನಾಯಿ ಮತ್ತು ಬೆಕ್ಕು ಮರಿಗಳ ಉಚಿತ ದತ್ತು ಕೊಡುವ ಶಿಬಿರ

Share with

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ ಸಹಕಾರದೊಂದಿಗೆ ಮಂಗಳೂರಿನ ಎನಿಮಲ್ ಕೇರ್ ಟ್ರಸ್ಟ್ ಸಂಸ್ಥೆಯು ಡಿ.3ರ ಆದಿತ್ಯವಾರದಂದು ಬಿ.ಸಿ ರೋಡಿನ ಖಾಸಗಿ ಬಸ್ಸು ನಿಲ್ದಾಣದ ಪಕ್ಕ, ಮೇಲ್ಸೇತುವೆ ಕೆಳಗೆ ಸಂಪೂರ್ಣವಾಗಿ ಲಸಿಕೆಗಳನ್ನು ಕೊಟ್ಟ ದೇಸಿ ತಳಿಯ ನಾಯಿ ಮತ್ತು ಬೆಕ್ಕು ಮರಿಗಳನ್ನು ಉಚಿತವಾಗಿ ದತ್ತು ನೀಡಲಿದ್ದಾರೆ.

ಬಿ.ಸಿ ರೋಡಿನಲ್ಲಿ ದೇಸಿ ತಳಿಯ ನಾಯಿ ಮತ್ತು ಬೆಕ್ಕು ಮರಿಗಳನ್ನು ಉಚಿತವಾಗಿ ದತ್ತು ನೀಡಲಿದ್ದಾರೆ.

ಮರಿಗಳನ್ನು ದತ್ತು ಪಡೆಯುವವರು ತಮ್ಮ ಆಧಾ‌ರ್ ಕಾರ್ಡ್ ಖಡ್ಡಾಯವಾಗಿ ನೀಡಬೇಕು, ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದ್ದು ಹಣ ಕೊಟ್ಟು ಪ್ರಾಣಿಗಳನ್ನು ಪಡೆಯುವ ಬದಲು ರಕ್ಷಿಸಿದ ದೇಸಿಯ ಪ್ರಾಣಿಗಳಿಗೆ ಬದುಕನ್ನು ಕೊಡಲು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರೋಟರಿ ಕ್ಲಬ್ ಬಂಟ್ವಾಳ ಹಾಗೂ ಎನಿಮಲ್ ಕೇ‌ರ್ ಟ್ರಸ್ಟ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.


Share with

Leave a Reply

Your email address will not be published. Required fields are marked *