ಮಣಿಪಾಲ: ಬ್ಯಾಟರಿ ಚಾಲಿತ ಉಚಿತ ಹ್ಯಾಂಡ್ ಫಿಟ್‌ಮೆಂಟ್ ಶಿಬಿರಕ್ಕೆ ಚಾಲನೆ

Share with

ಉಡುಪಿ: ರೋಟರಿ ಕ್ಲಬ್ ಮಣಿಪಾಲ, ಇನಾಲಿ ಫೌಂಡೇಶನ್ ಮತ್ತು ರೋಟರಿ ಕ್ಲಬ್ ಪೂನಾ ಡೌನ್ ಟೌನ್ ಸಹಯೋಗದಲ್ಲಿ ಮಣಿಪಾಲದ ರೋಟರಿ ಕ್ಲಬ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ಬ್ಯಾಟರಿ ಚಾಲಿತ ಉಚಿತ ಹ್ಯಾಂಡ್ ಫಿಟ್‌ಮೆಂಟ್ ಶಿಬಿರಕ್ಕೆ ಮಾ.24ರಂದು ಚಾಲನೆ ನೀಡಲಾಯಿತು.

ಮೂರು ದಿನಗಳ ಬ್ಯಾಟರಿ ಚಾಲಿತ ಉಚಿತ ಹ್ಯಾಂಡ್ ಫಿಟ್‌ಮೆಂಟ್ ಶಿಬಿರಕ್ಕೆ ಮಾ.24ರಂದು ಚಾಲನೆ ನೀಡಲಾಯಿತು.

ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ.ಗೌರಿ ಶಿಬಿರವನ್ನು ಉದ್ಘಾಟಿಸಿದರು. ಮಣಿಪಾಲ ಡಾಟ್ ನೆಟ್ ಸಿಇಒ ಪ್ರಶಾಂತ್ ಭಟ್, ಛೇರ್ಮನ್ ಪ್ರೇಮಲೀಲಾ ಭಟ್, ಡಾಟ್ ನೆಟ್, ಉಡುಪಿ ಆಭರಣ ಗ್ರೂಪ್ ಸಂಧ್ಯಾ ಕಾಮತ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ಡಾ.ಗಿರಿಜಾ ರಾವ್, ರೋಟರಿ ಕ್ಲಬ್ ಮಣಿಪಾಲ ಇದರ ಅಧ್ಯಕ್ಷ ಶ್ರೀಪತಿ ಉಪಸ್ಥಿತರಿದ್ದರು.

ಶಿಬಿರದ ಮೊದಲ ದಿನ 88ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದರು. ಇನ್ನೆರಡು ದಿನಗಳಲ್ಲಿ 250ಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *