
ವಿಟ್ಲ : ಬಂಟ್ವಾಳ ತಾಲೂಕಿನ ದ ಕ ಜಿ ಪ ಹಿ ಪ್ರಾ ಶಾಲೆ ಪಡಿಬಾಗಿಲು ಇಲ್ಲಿ ಸರಕಾರದಿಂದ ಮಕ್ಕಳಿಗೆ ಕೊಡುವ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮನಡೆಯಿತು
ಕಾರ್ಯಕ್ರಮ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಘವ ಮೈರ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಕೇಪುಗ್ರಾಮ ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ ಯವರು ತಮ್ಮ ಕೊಡುಗೆಯಾಗಿ ಹೊಸದಾಗಿ ದಾಖಲಾದ ಮಕ್ಕಳಿಗೆ ಕುಡಿಯುವ ನೀರಿನ ಬಾಟಲಿಯನ್ನು ನೀಡಿ ಸಹಕರಿಸಿದರು.
ವಿದ್ಯಾಸಿರಿ ಟ್ರಸ್ಟ್ ಅಧ್ಯಕ್ಷ ರಾದ ಪ್ರಭಾಕರ್ ಶೆಟ್ಟಿ, , ಅಡ್ಯನಡ್ಕ ಪ್ರಾಥಮಿಕ ಆರೋಗ್ಯಕೇಂದ್ರದ ಸಹಾಯಕಿ ಮಮತ ಸಿಸ್ಟರ್, ಆಶಾ ಕಾರ್ಯಕರ್ತೆ ರಮ್ಯಾ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಸವಿತಾ, ಸದಸ್ಯರಾದ ಶಶಿಕಲಾ, ಜಲಜಾಕ್ಷಿ, ದುರ್ಗಮ್ಮ, ಸರಸ್ವತಿ,ಲೀಲಾ, ವಿಜಯಕುಮಾರ್,ಜ್ಯೋತಿ ಲಕ್ಷ್ಮಿ ಉಪಸ್ಥಿತರಿದ್ದರು,
ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಕೆ ರೈ ಸ್ವಾಗತಿಸಿ, ಜಯಶ್ರೀ ವಂದಿಸಿದರು, ಸಹಶಿಕ್ಷಕಿ ಲಲಿತ ಕಾರ್ಯಕ್ರಮ ನಿರೂಪಿಸಿದರು.