ಉಪ್ಪಳ: ಮಾ.20ರಿಂದ ಇಚ್ಲಂಗೋಡು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

Share with

ಉಪ್ಪಳ: ಮಂಗಲ್ಪಾಡಿ ಇಚ್ಲಂಗೋಡು ಶ್ರೀ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರೀ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಮಾ.19 ಮತ್ತು ಮಾ.20ರಂದು ನಡೆಯಲಿದೆ.

ಮಾ.19ರಂದು ಬೆಳಿಗ್ಗೆ ಗಣಹೋಮ ನಡೆಯಿತು.

ಮಾ.19ರಂದು ಬೆಳಿಗ್ಗೆ ಗಣಹೋಮ ನಡೆಯಿತು. ರಾತ್ರಿ 7ಕ್ಕೆ ಸ್ಥಳ ಶುದ್ದಿ, ಸಾಮೂಹಿಕ ಪ್ರಾರ್ಥನೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ದೈವಗಳ ಭಂಡಾರ ಏರುವುದು, 9ಕ್ಕೆ ಶ್ರೀ ಉಳ್ಳಾಲ್ತಿ ಪೂಮಾಣಿ, ಕಿನ್ನಿಮಾಣಿ, ಮೈಸಂದಾಯ, ಪಿಲಿಚಾಮುಂಡಿ ನೇಮ ನಡೆಯಲಿದೆ.

ಮಾ.20ರಂದು ಬೆಳಿಗ್ಗೆ 5.30ಕ್ಕೆ ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವದ ನೇಮ, ಪ್ರಸಾದ ವಿತರಣೆ, 8ಕ್ಕೆ ಭಂಡಾರ ಇಳಿಯುವುದು, 8.30ಕ್ಕೆ ನಾಗಬನದಲ್ಲಿ ತಂಬಿಲ ಸೇವೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 3ಕ್ಕೆ ಭಂಡಾರ ಏರುವುದು, 3.30ಕ್ಕೆ ಬಬ್ಬರ್ಯ, ರಾಜಂದೈವ, ಶ್ರೀ ಕೋಮಾರು ಚಾಮುಂಡೇಶ್ವರೀ, ಬಂಟ ದೈವಗಳ ನೇಮ, ನಂತರ ಸ್ಥಳದ ಗುಳಿಗ, ಕಲಾಲ್ದ ಗುಳಿಗ, ಕೊರತಿ ದೈವಗಳ ನೇಮ, ಪ್ರಸಾದ ವಿತರಣೆ, ಭಂಡಾರ ಇಳಿಯುವುದು ನಡೆಯಲಿದೆ.


Share with

Leave a Reply

Your email address will not be published. Required fields are marked *