ಮಂಜೇಶ್ವರ: ಬಡಾಜೆ ಮುದುಕುಂಜ ಗುತ್ತು ಕುಟುಂಬಿಕರ ಧರ್ಮದೈವಗಳ ಸನ್ನಿಧಾನದಲ್ಲಿ ಧರ್ಮದೈವಗಳ ನೇಮೋತ್ಸವ ಮತ್ತು ವಾರ್ಷಿಕ ತಂಬಿಲ ಮಾರ್ಚ್ 5 ಮತ್ತು 6ರಂದು ನಡೆಯಲಿದೆ.
5ರಂದು ಬೆಳಿಗ್ಗೆ 7.30ಕ್ಕೆ ಗಣಹೋಮ, 9ಕ್ಕೆ ನಾಗತಂಬಿಲ, 10.30ಕ್ಕೆ ಮೈಸಂದಾಯ ದೈವದ ನೇಮೋತ್ಸವ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, 2ಕ್ಕೆ ಧೂಮಾವತಿ ಬಂಟ ದೈವಗಳ ನೇಮೋತ್ಸವ, ರಾತ್ರಿ 8ಕ್ಕೆ ಅನ್ನಸಂತರ್ಪಣೆ, 9ಕ್ಕೆ ಕಲ್ಲುರ್ಟಿ, ಪಂಜುರ್ಲಿ, ಕೊರತಿ ಹಾಗೂ ಗುಳಿಗ ದೈವಗಳ ನೇಮೋತ್ಸವ, 6ರಂದು ದೈವದ ತಂಬಿಲ ಸೇವೆ, ತರವಾಡು ಮನೆಯಲ್ಲಿ ಗುರುಹಿರಿಯರಿಗೆ ಬಡಿಸುವುದು ನಡೆಯಲಿದೆ.