ದೆಹಲಿ: ಕೇಂದ್ರ ಸರ್ಕಾರವು ಟೊಮೆಟೊ ರಿಯಾಯಿತಿ ದರವನ್ನು ಕೆ.ಜಿಗೆ ₹80ಕ್ಕೆ ಬದಲಾಗಿ ₹70ರೂಪಾಯಿಗೆ ಇಳಿಸಿದ್ದು, ಇಂದಿನಿಂದ(ಜು.20) ಜಾರಿಗೆ ಬರಲಿದೆ. ದೇಶದಾದ್ಯಂತ ಟೊಮೆಟೊ ದರವು ಭಾರಿ ಏರಿಕೆ ಕಂಡಿದ್ದರಿಂದ ಕಳೆದ ಶುಕ್ರವಾರದಿಂದ ಕೇಂದ್ರ ಸರ್ಕಾರವು ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಆರಂಭಿಸಿದೆ. ನಾಫೆಡ್ ಮತ್ತು ಎನ್‌ಸಿಸಿಎಫ್ ಸಂಸ್ಥೆಗಳು ಸರ್ಕಾರದ ಪರವಾಗಿ ಟೊಮೆಟೊ ಮಾರಾಟ ಮಾಡುತ್ತಿವೆ.
ಟೊಮೆಟೊ ದರವು ಇಳಿಕೆ ಕಾಣುತ್ತಿರುವುದರಿಂದ ಜು. 20ರಿಂದ ಕೆ.ಜಿಗೆ ₹70ರಂತೆ ಮಾರಾಟ ಮಾಡಲು ನಾಫೆಡ್ ಮತ್ತು ಎನ್‌ಸಿಸಿಎಫ್‌ಗೆ ಗ್ರಾಹಕ ವ್ಯವಹಾರಗಳ ಇಲಾಖೆಯು ಸೂಚನೆ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜು.16ರಂದು ಟೊಮೆಟೊ ದರವನ್ನು ₹90ರಿಂದ ₹80ಕ್ಕೆ ತಗ್ಗಿಸಲಾಗಿತ್ತು. ಇಲಾಖೆಯ ಸೂಚನೆಯಂತೆ ನಾಫೆಡ್ ಮತ್ತು ಎನ್‌ಸಿಸಿಎಫ್ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದ ಟೊಮೆಟೊ ಖರೀದಿಸುತ್ತಿವೆ.