ಮಂಜೇಶ್ವರ: ಸಿ.ಪಿ.ಐ ಮುಖಂಡ ಬಿ.ವಿ ರಾಜನ್ ರವರ ಅಂತ್ಯಸಂಸ್ಕಾರ ನಿನ್ನೆ ಮಧ್ಯಾಹ್ನ ರಾಮತ್ತ ಮಜಲ್ ಸಾರ್ವಜನಿಕ ಸ್ಮಶಾನದಲ್ಲಿ ನಡೆಸಲಾಯಿತು. ಮನೆಯಿಂದ ರೆಡ್ ವಾಲೆಂಟರ್ ರವರು ಮೃತದೇಹವನ್ನು ನೂರಾರು ಮಂದಿ ಜೊತೆಯಲ್ಲಿ ಸ್ಮಶಾನಕ್ಕೆ ತಲುಪಿಸಿ ಅಲ್ಲಿ ಅಲ್ಪ ಹೊತ್ತು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಯಿತು. ಬಳಿಕ ಅವರ ಪುತ್ರಿ ರಮ್ಯ ರವರು ಚಿತೆಗೆ ಬೆಂಕಿ ಹಚ್ಚಿದ್ದಾರೆ.
ನಿನ್ನೆ ಬೆಳಿಗ್ಗೆ ಮನೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಂಜೇಶ್ವರ ತಾಲೂಕು ತಶೀಲ್ದಾರ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು,ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್, ಹರೀಶ್ ಶೆಟ್ಟಿ ಮಾಡ, ಸುಕುಮಾರ ಉಪ್ಪಳ, ಪದ್ಮನಾಭ ಕಡಪ್ಪರ, ಅಶೋಕ್ ಕುಮಾರ ಹೊಳ್ಳ, ರಾಧಾ ಮಯ್ಯ, ಡಾ.ಚೂಂತಾರು, ಭಾರತೀಯ ಮಜ್ದೂರು ಸಂಘ ಮಂಜೇಶ್ವರ ವಲಯ ಸಮಿತಿ ಪದಾಧಿಕಾರಿಗಳು, ಸಹಿತ ವಿವಿಧ ಪಕ್ಷ, ಸಂಘ ಸಂಸ್ಥೆಗಳ, ಧಾರ್ಮಿಕ ಕ್ಷೇತ್ರಗಳ ಮುಖಂಡರು ಭೇಟಿ ನೀಡಿ ಸಂತಾಪ ಸೂಚಿಸಿದರು.