ಮದುವೆ ಮನೆಯಲ್ಲಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಘಟನೆ ಕೊಡಗಿನ ವಿರಾಜಪೇಟೆ ಪಟ್ಟಣದ ಮೊಗರಗಲ್ಲಿನಲ್ಲಿ ನಡೆದಿದೆ. ಮದುವೆಗೆ ಬಂದಿದ್ದ ಕೆಲವರು ಹೆಚ್ಚಿನ ಪ್ರಮಾಣದ ಹಣ ಇಟ್ಟುಕೊಂಡು ಜೂಜಾಟದಲ್ಲಿ ತೊಡಗಿದ್ದರು. ಪೊಲೀಸರು ಕಲ್ಯಾಣ ಮಂಟಪದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ, 4.25,545 ರೂ. ಗಳನ್ನ ಜಪ್ತಿ ಮಾಡಿದ್ದಾರೆ & 8 ಜನರನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




