ಗಾಂಧೀಜಿ ಚಿತ್ರ 1.76 ಕೋಟಿ ರೂ.ಗೆ ಮಾರಾಟ..!

Share with

ಲಂಡನ್‌: ಗಾಂಧೀಜಿಯವರ ಅಪರೂಪದ ತೈಲವರ್ಣ ಚಿತ್ರ ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. 1931ರಲ್ಲಿ ಗಾಂಧೀಜಿ ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲು ಲಂಡನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಕಲಾವಿದ ಕ್ಲೀರ್ ಲೈಟನ್ ಗಾಂಧೀಜಿಯ ಚಿತ್ರವನ್ನು ರಚಿಸಿದ್ದರು.

ಗಾಂಧಿ ಕಲಾವಿದರೆದುರು ಕುಳಿತು ರಚಿಸಿದ ಏಕೈಕ ತೈಲವರ್ಣ ಚಿತ್ರ ಇದಾಗಿದೆ. ಇದು ಬಹಳ ವಿಶೇಷವಾದ ಕಲಾಕೃತಿಯಾಗಿದೆ. ಈ ಕಲಾಕೃತಿಯನ್ನು 50 ರಿಂದ 70 ಸಾವಿರ ಪೌಂಡ್ಸ್ ಮೂಲಬೆಲೆ ನಿರ್ಧರಿಸಲಾಗಿತ್ತು, ಆದರೆ ಮಂಗಳವಾರ ಮುಕ್ತಾಯವಾದ ಹರಾಜಿನಲ್ಲಿ ಈ ಕಲಾಕೃತಿ 1,52,800 ಪೌಂಡ್ಸ್ (1.76 ಕೋಟಿ ರೂ.)ಗೆ ಹರಾಜಾಗಿದೆ ಎಂದು ಬೋನ್‌ಹ್ಯಾಮ್ಸ್ ಹರಾಜು ಕೇಂದ್ರದ ಮುಖ್ಯಸ್ಥೆ ರೈನಾನ್ ಡೆಮೆರಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *