ಉಪ್ಪಳ: ಭಾರೀ ಪ್ರಮಾಣದಲ್ಲಿ ಉಪೇಕ್ಷಿಸಿದ ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿ ಜನರಲ್ಲಿ ಆತಂಕ ವ್ಯಕ್ತವಾಗಿದೆ. ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ಬಸ್ ನಿಲ್ದಾಣ ಹಾಗೂ ಮೀನು ಮಾರುಕಟ್ಟೆ ಬಳಿಯಲ್ಲಿ ತ್ಯಾಜ್ಯದ ರಾಶಿ ಸಾರ್ವಜನಿಕರನ್ನು ಸಂಕಷ್ಟಕ್ಕೀಡುಮಾಡಿದೆ. ಮೀನು ಮಾರುಕಟ್ಟೆ ಬಳಿಯಲ್ಲಿ ಗೋಣಿ ಚೀಲದಲ್ಲಿ ತುಂಬಿಸಿ ಭಾರೀ ಪ್ರಮಾಣದ ತ್ಯಾಜ್ಯವನ್ನು ಉಪೇಕ್ಷಿಸಲಾಗಿದೆ.
ತ್ಯಾಜ್ಯದ ಪೈಕಿ ಸೆಲೂನಿನ ತಲೆ ಕೂದಲು ತುಂಬಿದ ಗೋಣಿ ಚೀಲವನ್ನು ನಾಯಿಗಳು ಬಸ್ ನಿಲ್ದಾಣದಲ್ಲಿ ಚೆಲ್ಲಾಪಿಲ್ಲಿಗೊಳಿಸಲಾಗಿದ್ದು, ಇದರಿಂದ ಮೀನು ಮಾರುಕಟ್ಟೆಗೆ ತೆರಳುವ ಜನರು ಸಮಸ್ಯೆಗೀಡಾಗಿದ್ದಾರೆ. ಅಲ್ಲದೆ ಭಾರೀ ಪ್ರಮಾಣದ ತಲೆಕೂದಲು ಗಾಳಿಗೆ ಪರಿಸರದ ವ್ಯಾಪಾರ ಸಂಸ್ಥೆಗಳಿಗೆ ಹಾರುವ ಸಾದ್ಯತೆ ಇದೆ.
ಕಳೆದ ಎರಡು ದಿನಗಳಿಂದ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿ ಕಂಡು ಬರುತ್ತಿದ್ದರೂ ಇದನ್ನು ಪಂಚಾಯತ್ ಅಧಿಕೃತರು ತೆರವುಗೊಳಿಸಲು ಮುಂದಾಗದ್ದು ಸಾರ್ವಜನಿಕರಲ್ಲಿ ಆಕ್ರೋಶ ಉಂಟಾಗಿದೆ. ಜನಬಿಡ ಪ್ರದೇಶದಲ್ಲಿ ತ್ಯಾಜ್ಯವನ್ನು ಉಪೇಕ್ಷಿಸುವುದರ ವಿರುದ್ದ ಪಂಚಾಯತ್ ಅಧಿಕೃತರು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ