
ಉಡುಪಿ: ಹಾಸನದಲ್ಲಿ ಬಂಧಿಸಲ್ಪಟ್ಟು ಉಡುಪಿಗೆ ಕರೆ ತರುವ ಸಂದರ್ಭದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಾರಿಯಾಗಲೆತ್ನಿಸಿ ಪೊಲೀಸರಿಂದ ಗುಂಡೇಟು ತಿಂದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇಸಾಕ್‌ನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಗುರುವಾರ ಸ್ಥಳಾಂತರ ಮಾಡಲಾಗಿದೆ.
ವೈದ್ಯರಿಂದ ದೃಢೀಕರಣ ಪತ್ರ ಪಡೆದ ಬಳಿಕ ಆತನನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುತ್ತದೆ. ಹಾಗೂ ಇತ್ತ ಕಡೆ ಗಾಯಗೊಂಡ ಪೊಲೀಸರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇತರ ಆರೋಪಿಗಳಾದ ಸುರತ್ಕಲ್‌ನ ರಾಹಿದ್ (25), ಕೇರಳದ ಸಾಮಿಲ್ (26) ಹಾಗೂ ನಿಜಾಮುದ್ದೀನ್ (25) ನನ್ನು ವಿಚಾರಣೆ ಮಾಡಿದ್ದು, ನ್ಯಾಯಾಲಯದ ಎದುರು ಹಾಜರು ಮಾಡಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಗರುಡ ಗ್ಯಾಂಗ್‌ನ ಸದಸ್ಯರು ಇವರೆಲ್ಲರೂ ಎನ್ನಲಾಗಿದೆ.