ಬಂಟ್ವಾಳ: ವಾಣಿಜ್ಯ ಅಡುಗೆ ಅನಿಲ ಪೂರೈಕೆ ವ್ಯತ್ಯಯದಿಂದ ಬಂಟ್ವಾಳದ ಒಂದಷ್ಟು ಹೊಟೇಲ್‌ಗಳಿಗೆ ತಟ್ಟಿದೆ. ಕೆಲವು ಹೊಟೇಲ್‌ಳು ಸೋಮವಾರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಗ್ಯಾಸ್ ಸಿಗದೇ ಇದ್ದರೆ ಮಾ. 17ರಿಂದ ಮತ್ತಷ್ಟು ಹೋಟೆಲ್‌ಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕು ಕೇಂದ್ರ ಬಿ.ಸಿ. ರೋಡ್‌ನಲ್ಲಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ನಾಗನ ಕ್ಯಾಂಟೀನ್ ಎಂದೇ ಪ್ರಸಿದ್ದಿ ಪಡೆದಿರುವ ಹೋಟೆಲ್ ಸೋಮವಾರ ಮುಚ್ಚಿದ್ದು, ಗ್ಯಾಸ್ ಸಿಗುವವರೆಗೂ ಮುಚ್ಚಿರಲಿದೆ. ಜತೆಗೆ ಇನ್ನೂ ಕೆಲವು ಸಣ್ಣ ಕ್ಯಾಂಟೀನ್‌ಗಳು ಸೋಮವಾರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು. ನಗರದ ಕೆಲವು ಕಡೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಡುಗೆ ಒಲೆಗಳನ್ನು ನಂಬಿರುವ ಹೊಟೇಲ್‌ಗಳು ಮಾತ್ರ ಕಾರ್ಯಾಚರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.




