ಪುತ್ತೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವದ ಆಮಂತ್ರಣವನ್ನು ಯುವವಾಹಿನಿ ಕೇಂದ್ರ ಸಮಿತಿಯ ಸಭೆಯಲ್ಲಿ ನೀಡಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಯುವವಾಹಿನಿಯ 35 ಘಟಕಗಳು ಸೇರಿ ಕೊಂಡು ಜಾತ್ರೋತ್ಸವದ ಯಶಸ್ವಿಗೆ ಕೆಲಸ ಮಾಡುತ್ತೇವೆ ಎಂದರು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿಯವರು ಮಾತನಾಡಿ ಗೆಜ್ಜೆಗಿರಿ ನಮಗೆಲ್ಲಾ ತಾಯಿ ಮನೆ ಇದ್ದ ಹಾಗೆ ಪ್ರತಿಯೊಬ್ಬರೂ ನಮ್ಮ ಮನೆ ಕಾರ್ಯಕ್ರಮ ಎಂದು ಕೊಂಡು ಜಾತ್ರೋತ್ಸವದಲ್ಲಿ ಬಾಗವಹಿಸಬೇಕು ಎಂದರು.

ಸಭೆಯಲ್ಲಿ ಪ್ರಥಮ ಉಪಾಧ್ಯಕ್ಷರಾದ ಅಶೋಕ್ ಪಡ್ಪು, ದ್ವಿತೀಯ ಉಪಾಧ್ಯಕ್ಷೆ ಹಾಗೂ ಗೆಜ್ಜೆಗಿರಿ ಜಾತ್ರೋತ್ಸವ ದ.ಕ.ಜಿಲ್ಲಾ ಮಹಿಳಾ ಸಂಚಾಲಕಿ ವಿದ್ಯಾ ರಾಕೇಶ್,ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರಿ, ಯುವವಾಹಿನಿ ನಿಕಟ ಪೂರ್ವ ಅಧ್ಯಕ್ಷ ಹರೀಶ್ ಕೆ ಪೂಜಾರಿ, ಕೇಂದ್ರ ಸಮಿತಿಯ ಗೌರವ ಸಲಹೆಗಾರರಾದ ಡಾ. ಎನ್.ಟಿ. ಅಂಚನ್, ಗೆಜ್ಜೆಗಿರಿ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್,ಗೌರವಾಧ್ಯಕ್ಷ ರಾದ ಜಯಂತ ನಡುಬೈಲ್, ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ, ಗೆಜ್ಜೆಗಿರಿ ಜಾತ್ರೋತ್ಸವ ವಿವಿಧ ವಲಯ ಸಮಿತಿಗಳ ಸಂಚಾಲಕರು, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳು ಹಾಗೂ, ಪಧಾಧಿಕಾರಿಗಳು ಉಪಸ್ಥಿತರಿದ್ದರು.