ಮಂಜೇಶ್ವರ : ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಸಾಲಿನ ಶಾಲಾ ವ್ಯವಸ್ಥಾಪನಾ ಸಮಿತಿಯ ಮಹಾಸಭೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸತೀಶ್ ಎಲಿಯಾಣರವರು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಚರಿತ ಚಿನಾಲ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸೌಮ್ಯ ಪಿ ಕಳೆದ ಶೈಕ್ಷಣಿಕ ವರ್ಷದ ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಲೆಕ್ಕಪತ್ರ ಮಂಡಿಸಿದರು.ಬಳಿಕ 2024-25 ನೇ ಸಾಲಿನ ನೂತನ ಶಾಲಾ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಜಯರಾಜ್ ಶೆಟ್ಟಿ ಚಾರ್ಲ, ಉಪಾಧ್ಯಕ್ಷರಾಗಿ ಸತೀಶ್ ಎಲಿಯಾಣ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತಿಭ ಕುಳಬೈಲು, ಸುಚರಿತ ಚಿನಾಲ, ಬಟ್ಯಪ್ಪ ಹೊಸಗದ್ದೆ ಕುಳೂರು, ಅಶ್ವಿತ ಕೇಮಜಲ್, ಭುಜಂಗ ಮೂಲ್ಯ ಎಲಿಯಾಣ, ಹರಿಣಾಕ್ಷಿ ಕೇಮಜಲ್, ಶ್ವೇತ ಕೇಮಜಲ್, ಹೇಮಲತ ಕುಳೂರು, ರವಿರಾಜ್ ಚಿಗುರುಪಾದೆ, ಸತೀಶ್ ಚಿನಾಲ, ಉಷ ಆದರ್ಶನಗರ, ಶಕೀಲ ಕರಿಪ್ಪಾರ್, ಆಯಿಶ ಕುಳೂರು, ಕವಿತ ಎಲಿಯಾಣ, ಮಮತ ಆದರ್ಶನಗರ ಆಯ್ಕೆಯಾದರು.ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ ಉಷ ಆದರ್ಶನಗರ,
ಉಪಾಧ್ಯಕ್ಷೆಯಾಗಿ ಹೇಮಲತ ಕುಳೂರು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕವಿತ ಎಲಿಯಾಣ, ಶಕೀಲ ಕರಿಪ್ಪಾರ್, ಪ್ರತಿಭ ಕುಳಬೈಲು, ಸುಚರಿತ ಚಿನಾಲ, ಶ್ವೇತ ಕೇಮಜಲ್, ಅಶ್ವಿತ ಕೇಮಜಲ್, ಹರಿಣಾಕ್ಷಿ ಕೇಮಜಲ್, ವಿನೋದ ಸುಣ್ಣಾರ, ನಯನ ಕುಳೂರು, ಪ್ರೇಮಲತ ಕುಳೂರು ಆಯ್ಕೆಯಾದರು. ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅನುಪಮ ಚಿನಾಲ ಆಯ್ಕೆಯಾದರು.
ಶಾಲಾ ಶಿಕ್ಷಕಿ ಅಶ್ವಿನಿ ಎಂ ಸ್ವಾಗತಿಸಿ, ಶಿಕ್ಷಕಿ ಶ್ವೇತ ಇ ವಂದಿಸಿದರು.