ಪುತ್ತೂರು : ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರು ನಗರದ ಬೊಳುವಾರಿನಲ್ಲಿ ವಾಸ್ತವ್ಯವಿರುವ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ ಎಂದು ವರದಿಯಾಗಿದೆ.
ಮೂಲತಃ ಸುರತ್ಕಲ್ ಕೃಷ್ಣಾಪುರ ನಿವಾಸಿ ನಾಮ್ ದೇವ್ ಆಚಾರ್ಯ ಎಂಬವರ ಪುತ್ರಿ ಸಾನಿಧ್ಯ(8) ಶಂಕಿತ ಡೆಂಗಿ ಪೀಡಿತರಾಗಿ ಮೃತಪಟ್ಟ ಬಾಲಕಿಯಾಗಿದ್ದಳೆ.
ಜ್ವರದಿಂದ ಬಲಳುತಿದ್ದ ಬಾಲಕಿಯನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆಕೆ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಡೆಂಗಿ ಹಾಗೂ ನ್ಯೂಮೋನಿಯಾ ಬಾಧಿಸಿರುವುದರಿಂದ ಆಕೆಯ ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ. ಮೃತ ಬಾಲಕಿ ತಂದೆ ಮತ್ತು ತಾಯಿಯನ್ನು ಅಗಲಿದ್ದಾಳೆ.