ಕಾಸರಗೋಡು: ಗೆಳತಿಯರ ಜತೆ ಸ್ನಾನಕ್ಕೆಂದು ಕೊಳಕ್ಕಿಳಿದ ಬಾಲಕಿ ಮೃತಪಟ್ಟ ಘಟನೆ ಜೂ.22ರಂದು ಮದ್ಯಾಹ್ನ ನಡೆದಿದೆ.

ತಿರೂರು ಪಾರಪರಂಬಿಲ್ ಮುಸ್ತಫ- ನಜಲಾಬಿ ದಂಪತಿಯ ಪುತ್ರಿ ಫಾತಿಮ ಮಿನ್ನ(13) ಮೃತಪಟ್ಟ ಬಾಲಕಿ. ಈಕೆ ವಳವನ್ನೂರು ಶಾಲೆಯಲ್ಲಿ 9 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಗೆಳತಿಯರ ಜತೆ ಸ್ನಾನಕ್ಕೆಂದು ಕೊಳದಲ್ಲಿ ಇಳಿದಾಗ ಕಾಲು ಜಾರಿ ಮುಳುಗಿದ್ದಾಳೆ ಎಂದು ಹೇಳಲಾಗಿದೆ. ಊರವರು ಸೇರಿ ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣವನ್ನು ಉಳಿಸಲು ಸಾಧ್ಯವಾಗಲಿಲ್ಲ.




