ಎಣ್ಣೆ ಏಟಲ್ಲಿ ಕ್ಯಾಬ್ಗೆ ಸ್ಕೂಟಿ ಗುದ್ದಿ ಯುವತಿಯರ ರಂಪಾಟ: ಸ್ಥಳೀಯರ ಜೊತೆಗೂ ಕಿರಿಕ್

Share with

ಬೆಂಗಳೂರು, ಫೆಬ್ರವರಿ 08: ಮದ್ಯದ ಅಮಲಿನಲ್ಲಿ ಕಾರು, ಬೈಕ್ಗಳಿಗೆ ದ್ವಿಚಕ್ರ ವಾಹನ ಗುದ್ದಿ ಯುವತಿಯರು ಕಿರಿಕ್ ಮಾಡಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ನಡೆದಿದೆ. ಕ್ಯಾಬ್ ಡ್ರೈವರ್ ಜೊತೆ ವಾಗ್ವಾದ ನಡೆಸಿ ಆತನ ಮೇಲೆ ಹಲ್ಲೆ ನಡೆಸಲು ಉತ್ತರ ಭಾರತೀಯ ಯುವತಿಯರು ಯತ್ನಿಸಿದ್ದು, ಪ್ರಶ್ನಿಸಿದ ಜನರ ಜೊತೆಗೂ ಯುವತಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಕೂಡಲೇ ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳ್ಕೆ ಬಂದರೂ ಯುವತಿಯರ ಹೈಡ್ರಾಮಾ ಮಾತ್ರ ನಿಂತಿಲ್ಲ.

ಕೈಗೆ ಚೈನ್ ಸುತ್ತಿಕೊಂಡು ಹಲ್ಲೆ ಆರೋಪ
ಸ್ನೇಹಿತರ ಜೊತೆಗೆ ಖಾಸಗಿ ಹೋಟೆಲ್ಗೆ ಬಂದಿದ್ದ ಜೆ.ಪಿ.ನಗರ ಹಾಗೂ ಕೋರಮಂಗಲದದ ಇಬ್ಬರು ಯುವತಿಯರು ವಾಪಸ್ ಹೋಗುವಾಗ ಹಿಂದಿನಿಂದ ಕ್ಯಾಬ್ಗೆ ಸ್ಕೂಟಿ ಡಿಕ್ಕಿ ಹೊಡೆದಿದ್ದಾರೆ.  ಯುವತಿಯರನ್ನು ಕ್ಯಾಬ್ ಚಾಲಕ ಅಹ್ಮದ್ ಪ್ರಶ್ನೆ ಮಾಡಿದ್ದಕ್ಕೆ, ಆತನಿಗೆ ನಿಂದಿಸಿ ಎಸ್ಕೇಪ್ ಆಗಲು ಯತ್ನಿಸಿದ್ದ ಯುವತಿಯರನ್ನು ಸ್ಥಳೀಯರು ತಡೆದಿದ್ದಾರೆ. ಈ ವೇಳೆ ಕೈಗೆ ಚೈನ್ ಸುತ್ತಿಕೊಂಡು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಸಭ್ಯ ಸನ್ನೆ ತೋರಿಸಿ ನಿಂದನೆ ನಡೆಸಿರುವ ಆರೋಪ ಕೇಳಿಬಂದಿದೆ. ಬಳಿಕ ಇಬ್ಬರು ಯುವತಿಯರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಲೀಸಾ ಮತ್ತು ಮ್ಯಾಥ್ಯೂ ಎಂಬ ಯುವತಿಯರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಕೀ ತೆಗೆಯಲು ಹೋದಾಗ ಹಲ್ಲೆ’
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾಬ್ ಚಾಲಕ ಅಹ್ಮದ್, ಕಸ್ಟಮರ್ ಪಿಕ್ಅಪ್ಗೆಂದು ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದು ಸ್ಕೂಟಿನ ಕ್ಯಾಬ್ಗೆ ಟಚ್ ಮಾಡಿದ್ದಾರೆ. ಈ ವೇಳೆ ಗಾಡಿಗೆ ಡ್ಯಾಮೇಜ್ ಆಗಿದ್ದನ್ನ ಕಟ್ಟಿಕೊಡಿ ಎಂದು ಅವರ ಬಳಿ ಕೇಳಿದ್ದೇನೆ. ಆ ಸಂದರ್ಭದಲ್ಲಿ ಅವರು ಗಾಡಿ ಸ್ಟಾರ್ಟ್ ಮಾಡಿಕೊಂಡು ಹೋಗೋಕೆ ನೋಡಿದ್ದು, ಕೂಡಲೇ ಸ್ಥಳೀಯರೆಲ್ಲ ಸೇರಿ ಅವರನ್ನ ಹಿಡಿದುಕೊಂಡಿದ್ದಾರೆ. ನಾನು ಕೀ ತೆಗೆಯಲು ಹೋದಾಗ ನನ್ನ ಮೇಲೆ ಹಲ್ಲೆ ಮಾಡಿದ್ದು, ಚೈನ್ ಸುತ್ತಿಕೊಂಡು ಮುಖ, ಕೈ, ಬೆನ್ನಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳೀಯರೆಲ್ಲ ಸೇರಿ ನನಗೆ ಸಪೋರ್ಟ್ ಮಾಡಿದ್ದು, ಘಟನೆ ಬಗ್ಗೆ ದೂರು ನೀಡಿರೋದಾಗಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *