Goa ನೈಟ್ ಕ್ಲಬ್ ದುರಂತ… ಲುಥಾ ಒಡೆತನದ ನೈಟ್ ಕ್ಲಬ್ ನೆಲಸಮಗೊಳಿಸಲು ಸಿಎಂ ಆದೇಶ

Share with

ಪರಾರಿಯಾಗಿರುವ ಮಾಲೀಕರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್‌ ಜಾರಿ

ಪಣಜಿ: ಕಳೆದ ಶನಿವಾರ (ಡಿ.6) ಅರ್ಪೋರಾದ ‘ಬಿರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ 25 ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದ ದುರಂತದ ಬೆನ್ನಲ್ಲೇ ರಾಜ್ಯ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು ಅದರಂತೆ ಲುಥಾ ಒಡೆತನದ ಮತ್ತೊಂದು ನೈಟ್ ಕ್ಲಬ್ ವಾಗೇಟರ್‌ನ ರೋಮಿಯೋ ಲೇನ್‌ (Romeo Lane) ಅನ್ನು ತಕ್ಷಣವೇ ನೆಲಸಮಗೊಳಿಸುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಅಗ್ನಿ ದುರಂತದ ಬಳಿಕ ಗೋವಾದಿಂದ ಪರಾರಿಯಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ಶಂಕಿಸಲಾದ ಸೌರಭ್ ಲುಥಾ ಮತ್ತು ಗೌರವ್ ಲುಥಾ ಅವರನ್ನು ಪತ್ತೆಹಚ್ಚಲು ಬ್ಲೂ ಕಾರ್ನರ್ ನೋಟಿಸ್‌ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.

ಲುಥಾ ಸಹೋದರರು ವಾಗೇಟರ್ ಮತ್ತು ಇತರ ಕರಾವಳಿ ಪ್ರದೇಶಗಳಲ್ಲಿ ನಡೆಸುತ್ತಿರುವ ಎಲ್ಲ ಕ್ಲಬ್‌ಗಳು ಮತ್ತು ಕೆಫೆಗಳನ್ನು ನೆಲಸಮಗೊಳಿಸಲು ಗೋವಾ ಸರ್ಕಾರ ನಿರ್ಧರಿಸಿದೆ. ಇದರ ಜೊತೆಗೆ ವಾಗೇಟರ್ ಬೀಚ್‌ನ ಪಕ್ಕದಲ್ಲಿರುವ ಬೆಟ್ಟ ಪ್ರದೇಶದಲ್ಲಿ ಲೂತ್ರಾ ಸಹೋದರರು ನಿರ್ಮಿಸಿದ್ದ ಮತ್ತೊಂದು ನೈಟ್ ಕ್ಲಬ್‌ನ ಬಗ್ಗೆ ಮಹತ್ವದ ಪುರಾವೆಗಳು ಲಭ್ಯವಾಗಿವೆ. ಈ ಕ್ಲಬ್ ಅನ್ನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಮತ್ತು ಅದಕ್ಕೆ ಯಾವುದೇ ಅಗ್ನಿ ಸುರಕ್ಷತಾ ಅನುಮತಿಗಳು, ರಚನಾತ್ಮಕ ಪರವಾನಗಿಗಳು ಅಥವಾ ಪರಿಸರ ಅನುಮೋದನೆಗಳು ಇರಲಿಲ್ಲ ಎಂದು ತಿಳಿದು ಬಂದಿದ್ದು ಇದೆ ಕಾರಣಕ್ಕೆ ಸಿಎಂ ಆರೋಪಿ ಸಹೋದರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಲಾಗಿದೆ.


Share with

Leave a Reply

Your email address will not be published. Required fields are marked *