ರೈಲಿನಲ್ಲಿ ಯುವಕನಿಗೆ ಮಾದಕ ಬಿಸ್ಕಟ್ ನೀಡಿ ಚಿನ್ನ, ಲ್ಯಾಪ್ಟಾಪ್ ಕಳವು..! 24 ಗಂಟೆಗಳಲ್ಲಿ ಆರೋಪಿಗಳ ಸೆರೆ

Share with

ಕಲ್ಲಿಕೋಟೆ: ರೈಲು ಪ್ರಯಾಣ ಮಧ್ಯೆ ಮಾದಕ ಬಿಸ್ಕೆಟ್ ನೀಡಿ ಪ್ರಜ್ಞಾಹೀನ ಗೊಳಿಸಿ ಯುವಕನ ಚಿನ್ನ ಹಾಗೂ ಲ್ಯಾಪ್‌ಟಾಪ್ ಕಳವು ಗೈದ ಪ್ರಕರಣದಲ್ಲಿ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ನಡೆದ 24 ಗಂಟೆಗಳೊಳಗೆ ಕಲ್ಲಿಕೋಟೆಯಿಂದ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ತನಿಖಾ ತಂಡ ತಿಳಿಸಿದೆ.

ವಡಗರ ಪುದುಪಣಂ ನಿವಾಸಿ ವಿ.ಪಿ. ಸರೀನ್‌ರ ಚಿನ್ನ ಹಾಗೂ ಹಣ ಒಳಗೊಂಡ ಬ್ಯಾಗನ್ನು ಕಳವುಗೈಯ್ಯ ಲಾಗಿತ್ತು. ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ರೈಲ್ವೇ ಪೊಲೀಸರು ಹಾಗೂ ಆರ್‌ಪಿಎಫ್‌ ಜಂಟಿಯಾಗಿ ಪ್ರತ್ಯೇಕ ತಂಡ ರೂಪೀಕರಿಸಿ ನಡೆಸಿದ ತನಿಖೆಯ ಕೊನೆಯಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಬಿಹಾರ್ ಆರಾರಿಯ ನಿವಾಸಿಗಳಾದ ಅಬ್ದುಲ್ಲ ರಝಾಕ್ (34), ಮುಹಮ್ಮದ್ ಮಹಮೂದ್ ಆಲವ್ (25), ಮುಹಮ್ಮದ್ ಸಫರ್ (40) ಎಂಬಿವರು ಸೆರೆಯಾದವರು. ಆರೋಪಿ ಗಳಿಂದ ಚಿನ್ನ, ನಗದು ಹಾಗೂ ಇತರ ವಸ್ತುಗಳನ್ನು ಪತ್ತೆಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಲಬಾ‌ರ್ ಎಕ್ಸ್‌ಪ್ರೆಸ್‌ನ ಎಸ್ ೪ ಕಂಪಾರ್ಟ್ ಮೆಂಟ್‌ನಲ್ಲಿ ಮಂಗಳೂರಿನಿಂದ ವಡಗರೆಗೆ ತೆರಳುತ್ತಿದ್ದ ಸರೀನ್‌ಗೆ ಮಾದಕ ಬಿಸ್ಕೆಟ್ ನೀಡಿ ಕಳವು ಗೈಯ್ಯಲಾಗಿದೆ.


Share with

Leave a Reply

Your email address will not be published. Required fields are marked *