
ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಇದೀಗ 2000 ದಿಡೀರ್ ಏರಿಕೆ ಕಂಡಿದ್ದು, ಈ ಮೂಲಕ 10 ಗ್ರಾಂ ಚಿನ್ನಕ್ಕೆ ಒಟ್ಟು 95,000 ಆದಂತಾಗಿದೆ.

ಮಂಗಳವಾರ ಒಂದೇ ದಿನ 10 ಗ್ರಾಂ ಚಿನ್ನದ ಎರಡು ಸಾವಿರ ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 94,000 ರೂ., ಬೆಂಗಳೂರಿನಲ್ಲಿ 95,000 ರೂ.ಗೆ ತಲುಪಿ ಹೊಸ ದಾಖಲೆ ಬರೆದಿದೆ.
ಬೆಂಗಳೂರಿನಲ್ಲಿ 10 ಗ್ರಾಂ ಪರಿಶುದ್ಧ ಚಿನ್ನದ ಗಟ್ಟಿಯ ದರ 95,890 ರೂಪಾಯಿಗೆ ತಲುಪಿದೆ. ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 94,150 ರೂಪಾಯಿಗೆ ತಲುಪಿದೆ.




