ಮುಂಬೈ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ, ಹಣದುಬ್ಬರ ಕಳವಳದ ಹಿನ್ನೆಲೆಯಲ್ಲಿ ಸೋಮವಾರ ಅಂತಾರಾಷ್ಟ್ರೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯ ಏರಿಳಿತ ಮುಂದುವರಿದಿದೆ.

ಮಲ್ಟಿ ಕಮಾಡಿಟಿ ಎಂಜ್ (MCX) ನಲ್ಲಿ, ಚಿನ್ನದ ಪ್ಯೂಚರ್‌ಗಳು ಆರಂಭಿಕ ವಹಿವಾಟಿನಲ್ಲಿ ತೀವ್ರವಾಗಿ ಕುಸಿತ ಕಂಡಿದೆ. ಚಿನ್ನದ ಪ್ಯೂಚರ್‌ಗಳು ಬೆಳಗ್ಗೆ 9:40ರ ಹೊತ್ತಿಗೆ ಶೇ. 5.59 ಅಥವಾ ರೂ. 8,089 ರಷ್ಟು ಕುಸಿದು, 10 ಗ್ರಾಂಗೆ ರೂ. 1,36,403 ರೂಪಾಯಿಗೆ ಇಳಿಕೆಯಾಗಲಿದೆ, ಆದರೆ ಬೆಳ್ಳಿ ಶೇ. 6.63 ಅಥವಾ ರೂ. 15,043 ರಷ್ಟು ಇಳಿದು ಪ್ರತಿ ಕೆಜಿಗೆ 2,11,729 ರೂಪಾಯಿಗೆ ಇಳಿಕೆಯಾಗಲಿದೆ.
ಇಂದಿನ ಮಾರುಕಟ್ಟೆ ವಹಿವಾಟಿನ ಪ್ರಕಾರ, 24 ಕ್ಯಾರೆಟ್ ನ ಒಂದು ಗ್ರಾಮ್ ಚಿನ್ನದ ಬೆಲೆ 14,002 ರೂಪಾಯಿಯಾಗಿದ್ದು, 595 ರೂ. ಇಳಿಕೆಯಾಗಿದೆ. ಅದೇ ರೀತಿ 22 ಕ್ಯಾರೆಟ್ ನ ಒಂದು ಗ್ರಾಮ್ ಚಿನ್ನದ ಬೆಲೆ 12,835 ರೂಪಾಯಿಯಾಗಿದ್ದು, 545 ರೂ. ಇಳಿಕೆಯಾಗಿದೆ. 18 ಕ್ಯಾರೆಟ್ ನ ಒಂದು ಗ್ರಾಮ್ ಚಿನ್ನದ ಬೆಲೆ 10,502 ರೂಪಾಯಿ (446 ರೂಪಾಯಿ) ಇಳಿಕೆ.
24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 1,40,020 ರೂಪಾಯಿ, ಭಾನುವಾರ 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 1,45,970 ರೂಪಾಯಿಯಾಗಿತ್ತು. 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 1,28, 350 ರೂಪಾಯಿ, ಭಾನುವಾರ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 1,33,800 ರೂಪಾಯಿ. 18 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 1,05,020 ರೂಪಾಯಿ, ಭಾನುವಾರ 18 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ 1,09,480 ರೂಪಾಯಿ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ನ ಒಂದು ಗ್ರಾಮ್ ಚಿನ್ನದ ಬೆಲೆ 14,002 ರೂಪಾಯಿ, 22 ಕ್ಯಾರೆಟ್ ನ ಒಂದು ಗ್ರಾಮ್ ಚಿನ್ನದ ಬೆಲೆ 12,835 ರೂಪಾಯಿ ಹಾಗೂ 18 ಕ್ಯಾರೆಟ್ ನ ಒಂದು ಗ್ರಾಮ್ ಚಿನ್ನದ ಬೆಲೆ 10,502 ರೂಪಾಯಿ.
ಬೆಳ್ಳಿ ಬೆಲೆ ಕುಸಿತ:
ಇಂದಿನ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಬೆಳ್ಳಿ ಬೆಲೆ 2,12,776 ರೂಪಾಯಿಯಾಗಿದ್ದು, ಆರಂಭಿಕ ವಹಿವಾಟಿನಲ್ಲಿ 13,996 ರೂಪಾಯಿ ಇಳಿಕೆ ಕಂಡಿದೆ.




