ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತೀಯ ಹಡಗುಗಳು & ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಇರಾನ್ ಭರವಸೆ ನೀಡಿದೆ. ‘ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಯಲ್ಲಿದ್ದಾರೆ’ ಎಂದು ಭಾರತದಲ್ಲಿರುವ ಇರಾನಿನ ರಾಯಭಾರ ಕಚೇರಿ ಪ್ರಕಟಿಸಿದೆ.

ಯುದ್ಧದ ಸಂಘರ್ಷದಿಂದಾಗಿ ಭಾರತಕ್ಕೆ ತೆರಳುತ್ತಿದ್ದ 19 ತೈಲ ಟ್ಯಾಂಕರ್‌ಗಳ ಜೊತೆಗೆ, ಸಾವಿರಾರು ಭಾರತೀಯ ಸಿಬ್ಬಂದಿ ಈ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ರಾಜತಾಂತ್ರಿಕ ಮಾತುಕತೆಯ ಬಳಿಕ ಈ ಹಡಗುಗಳಲ್ಲಿ ಕೆಲವು ಈಗಾಗಲೇ ಸುರಕ್ಷಿತವಾಗಿ ಮನೆಗೆ ಮರಳಿವೆ.




